BREAKING: ಗಾಯಕ ಲಕ್ಕಿ ಅಲಿ ವಿರುದ್ಧ ಬಂಧನ ವಾರಂಟ್ ಜಾರಿ

ಮುಂಬೈ: ಬಾಲಿವುಡ್ ಗಾಯಕ ಮಕ್ಸೂದ್ ಅಲಿ @ ಲಕ್ಕಿ ಅಲಿಗೆ ಸಂಕಷ್ಟ ಎದುರಾಗಿದೆ, ಚಕ್ ಬೌನ್ಸ್ ಪ್ರಕರಣದಲ್ಲಿ ಲಕ್ಕಿ ಅಲಿ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ.

2014ರಲ್ಲಿ ಸೈಯದ್ ರಿಜ್ವಾಲ್ ಎಂಬುವವರು ಲಕ್ಕಿ ಅಲಿ ವಿರುದ್ಧ ಖಾಸಗಿ ದೂರು ನೀಡಿದ್ದರು. ಜಮೀನು ಮಾರುವುದಾಗಿ ಹೇಳಿ ಹಣ ಪಡೆದು ಹಿಂತಿರುಗಿಸದೇ ವಂಚಿಸಿದ್ದಾಗಿ ದೂರುದ್ದರು. 27 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ. ಸಿವಿಲ್ ದಾವೆಯಲ್ಲಿ ರಾಜಿ ಮಾಡಿಕೊಂಡು ಚೆಕ್ ನೀಡಿದ್ದರು. 2002ರ ವ್ಯವಹಾರ ಸಂಬಂಧ 2013ರಲ್ಲಿ ಚೆಕ್ ನೀಡಿದ್ದರು. 92 ಲಕ್ಷದ ಚೆಕ್ ಬೌನ್ಸ್ ಆದ ಕಾರಣ ಕೇಸ್ ಹಾಕಿದ್ದರು.

ಮ್ಯಾಜಿಸ್ಟ್ರೇಟ್ ಕೋರ್ಟ್ ಲಕ್ಕಿ ಅಲಿಗೆ 92.10 ಲಕ್ಷ ದಂಡ ವಿಧಿಸಿತ್ತು. ದಂಡ ಪಾವತಿ ಮಾಡದೊದ್ದರೆ 6 ತಿಂಗಳ ಸೆರೆವಾಸ ಅನುಭವಿಸುವಂತೆ ಆದೇಶ ನೀಡಿತ್ತು. ಸುಪ್ರೀಂಕೋರ್ಟ್ ಕೂಡ ಈ ಆದೇಶ ರದ್ದುಪಡಿಸಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಲಕ್ಕಿ ಅಲಿ ವಿರುದ್ಧ 6 ತಿಂಗಳು ಸೆರೆವಾಸ ವಾರಂಟ್ ಜಾರಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read