ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೊಲೆ ಆರೋಪ ಮಾಡಿರುವ ಮಹೇಶ್ ತಿಮರೋಡಿ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮಹೇಶ್ ತಿಮರೋಡಿ ಒಬ್ಬ ಬಿಜೆಪಿ ಕಾರ್ಯಕರ್ತ. ಆತ ಮೊದಲು ಬಿಜೆಪಿ ನಾಯಕರ ವಿರುದ್ಧವೇ ಮಾತನಾಡಿದ್ದಾನೆ. ಆತ ನೀಡಿರುವ ಹೇಳಿಕೆ ವಿಡಿಯೋ ಗಮನಿಸಿ. ಆತ ಬಿಜೆಪಿ ನಾಯಕರ ವಿರುದ್ಧವೇ ಆರೋಪಗಳನ್ನು ಮಾಡಿದ್ದಾನೆ. ತಮ್ಮ ಪಕ್ಷದ ವಿರುದ್ಧವೇ ಕಾರ್ಯಕರ್ತ ಆರೋಪ ಮಾಡಿದ್ದಕ್ಕೆ ಈಗ ಬಿಜೆಪಿ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಮಹೇಶ್ ತಿಮರೋಡಿ ಯಾರು? ಆತ ಯಾವ ಪಕ್ಷದ ಕಾರ್ಯಕರ್ತ? ಆತನ ಹೇಳಿಕೆಗಳ ಬಗ್ಗೆ ನನಗೂ ವಿಡಿಯೋ ಬಂದಿದೆ. ಬಿಜೆಪಿಯವರ ವಿರುದ್ಧವೇ ಆತ ಹೇಳಿಕೆಗಳನ್ನು ನೀಡಿದ್ದಾನೆ ತಮ್ಮ ವಿರುದ್ಧ ಆರೋಪ ಬಂದಿದ್ದಕ್ಕೆ ಈಗ ಬಿಜೆಪಿಯವರು ಅದನ್ನು ತಿರುಗಿಸುತ್ತಿದ್ದಾರೆ ಎಂದರು.