ಬೆಂಗಳೂರು : ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಎಸ್ ಐ ಟಿ ವಿಚಾರಣೆ ವೇಳೆ ಅನಾಮಿಕ ದೂರುದಾರ ಸ್ಪೋಟಕ ಹೇಳಿಕೆ ನೀಡಿದ್ದಾನೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಅನಾಮಿಕ ದೂರುದಾರ ಎಸ್ ಐ ಟಿ ಅಧಿಕಾರಿಗಳ ಮುಂದೆ ಸ್ಪೋಟಕ ಹೇಳಿಕೆ ನೀಡಿದ್ದಾನೆ.
ಎಸ್ ಐ ಟಿ ಅಧಿಕಾರಿಗಳ ವಿಚಾರಣೆ ವೇಳೆ ಆತ ಸತ್ಯ ಬಾಯಿಬಿಟ್ಟಿದ್ದಾನೆ. ನಾನು ತುಂಬಾ ಒತ್ತಡಕ್ಕೆ ಒಳಗಾಗಿ ಈ ರೀತಿ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ನನಗೆ ಮೂರು ಜನರು ಪೊಲೀಸರ ಮುಂದೆ ಏನು ಹೇಳಬೇಕು ಎಂದು ಹೇಳಿಕೊಟ್ಟಿದ್ದರು. ಅವರು ಒತ್ತಡ ಹಾಕಿದ್ದರಿಂದ ಆ ರೀತಿ ಹೇಳಿದೆ ಎಂದು ಆತ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ.
2014 ರಿಂದ ಧರ್ಮಸ್ಥಳದಿಂದ ಹೋಗಿ ತಮಿಳುನಾಡಿನಲ್ಲಿ ವಾಸವಿದ್ದೆ. 2023 ರ ಡಿಸೆಂಬರ್ ನಲ್ಲಿ ನನ್ನನ್ನು ಒಂದು ಗುಂಪು ಸಂಪರ್ಕಿಸಿತ್ತು. ತಮಿಳುನಾಡಿನಿಂದ ನನ್ನನ್ನು ಒಂದು ಗುಂಪು ಕರೆತಂದಿತ್ತು. ಅವರು ಧರ್ಮಸ್ಥಳದಲ್ಲಿ ಶವ ಹೂತ ಬಗ್ಗೆ ನನ್ನನ್ನು ಕೇಳಿದ್ದರು. ನಾನು ಲೀಗಲ್ ಆಗಿ ಶವಗಳನ್ನು ಹೂತಿದ್ದೇನೆ ಎಂದು ಹೇಳಿದ್ದೆ, ತಪ್ಪು ಹೇಳಿಕೆ ನೀಡುವಂತೆ ನನಗೆ ಹೇಳಿದ್ದರು. ಬುರುಡೆ ಕೊಟ್ಟು ಪೊಲೀಸರಿಗೆ ಶರಣಾಗುವಂತೆ ಹೇಳಿದ್ದರು. ಸುಜಾತಾ ಭಟ್ ದೂರು ಕೊಡುವ ತನಕ ನನಗೆ ಭಯವಿತ್ತು. ಆಮೇಲೆ ಧೈರ್ಯ ಬಂತು ಎಂದು ಆತ ಹೇಳಿದ್ದಾನೆ. ಆ ಗುಂಪು ಬುರುಡೆ ಕೊಟ್ಟು ಪೊಲೀಸರಿಗೆ ಶರಣಾಗುವಂತೆ ಹೇಳಿತ್ತು, ಅವರು ಹೇಳಿದ ಹಾಗೆ ಮಾಡಿದೆ ಎಂದಿದ್ದಾನೆ. ಕಳೆದ 2 ದಿನಗಳಿಂದ ಎಸ್ ಐ ಟಿ ಮಾಸ್ಕ್ ಮ್ಯಾನ್ ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಯಲಾಗಿದೆ.