ಬೆಂಗಳೂರು: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಧರ್ಮಸ್ಥಳಕ್ಕೆ ಭೇಟಿ ನೀಡಿರುವ ಬಿಜೆಪಿ ನಾಯಕರು ಶ್ರೀಮಂಜುನಾಥ ಸ್ವಾಮಿ ದರ್ಶನ ಪಡೆದು, ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಧರ್ಮಸ್ಥಳದ ಬಗ್ಗೆ ಷಡ್ಯಂತ್ರ ನಡೆದರೂ ಈವರೆಗೆ ಕಡಿವಾಣ ಹಾಕಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಯ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ನಾವು ಧರ್ಮಸ್ಥಳ ವಿಚಾರವಾಗಿ ರಾಜಕಾರಣ ಮಾಡುತ್ತಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ತಾವು ಧರ್ಮಸ್ಥಳದ ಪರಮಭಕ್ತ ಎಂದು ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ನಿಜವಾಗಿಯೂ ಭಕ್ತರಾಗಿದ್ದರೆ ಧರ್ಮಸ್ಥಳದಲ್ಲಿ ನಡೆದ ಷಡ್ಯಂತ್ರವನ್ನು ಬಯಲು ಮಾಡಲಿ. ಷಡ್ಯಂತ್ರ ಹಿಂದೆ ಇದ್ವರು ಯಾರು ಎಂಬುದನ್ನು ಹೇಳಲಿ ಎಂದರು.
ಸಂದರ್ಭ ಬಂದಾಗ ಷಡ್ಯಂತ್ರ ಬಯಲು ಮಾಡುತ್ತೇನೆ ಎಂದು ಅವರೇ ಹೇಳಿದ್ದಾರೆ. ಸಂದರ್ಭ ಬಂದಾಗ ಷಡ್ಯಂತ್ರ ಬಯಲು ಎಂದಿದರೆ. ಇನ್ನೂ ಸದರ್ಭ ಬಂದಿಲ್ಲವೇ? ಧರ್ಮಸ್ಥಳದ ಬಗ್ಗೆ ಇನ್ನೆಷ್ಟು ಅಪಪ್ರಾಚ ಆಗಬೇಕು? ಇದನ್ನು ನಾವು ಪ್ರಶ್ನೆ ಮಾಡುತ್ತಿಲ್ಲ. ರಾಜ್ಯದ ಜನತೆ ನಿಮ್ಮನ್ನು ಪ್ರಶ್ನಿಸುತ್ತಿದಾರೆ ಎಂದು ಕಿಡಿಕಾರಿದರು.