ಚಿಕ್ಕಬಳ್ಳಾಪುರ: ವೀಕೆಂಡ್ ಹಿನ್ನೆಲೆಯಲ್ಲಿ ನಂದಿಗಿರಿ ಧಾಮಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿದೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿ ಧಾಮದಲ್ಲಿ ಸಕಾಲಕ್ಕೆ ಪ್ರವೇಶ ಟಿಕೆಟ್ ಸಿಗದೇ ಪ್ರವಾಸಿಗರು ಪರದಾಟ ನಡೆಸುವಂತಾಗಿದೆ.
ಗಿರಿಧಾಮದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸಾವಿರಾರು ಪ್ರವಾಸಿಗರು ಪರದಾಟ ನಡೆಸಿದ್ದಾರೆ. ಕಳೆದು ಒಂದು ಗಂಟೆಯಿಂದ ಪ್ರವಾಸಿಗರು ಸಾಲುಗಟ್ಟಿ ನಿಂತಿದ್ದಾರೆ. ಸಾವಿರಾರು ಜನರಿಗೆ ಎರಡು ಕೌಂಟರ್ ಗಳಲ್ಲಿ ಮಾತ್ರ ಟಿಕೆಟ್ ವಿತರಿಸಲಾಗುತ್ತಿದೆ. ಸುರಿಯುವ ಮಳೆಯನ್ನು ಲೆಕ್ಕಿಸದೆ ಪ್ರವಾಸಿಗರು ಸಾಲುಗಟ್ಟಿ ನಿಂತಿದ್ದಾರೆ. ನಂದಿ ಗಿರಿಧಾಮಕ್ಕೆ ಬಂದರೂ ಪ್ರವೇಶ ಟಿಕೆಟ್ ನೀಡಲು ವಿಳಂಬ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.