BREAKING : ಬೆಂಗಳೂರು ‘ನಿಗೂಢ ಸ್ಪೋಟ’ ಕೇಸ್ ತನಿಖೆಗಿಳಿದ ಪೊಲೀಸ್ರು : ‘ಬಾಂಬ್ ನಿಷ್ಕ್ರಿಯ ದಳ’ದಿಂದಲೂ ಶೋಧ.!

ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆ ದಿನವೇ ಬೆಂಗಳೂರಿನಲ್ಲಿ ನಿಗೂಢ ಸ್ಪೋಟವೊಂದು ಸಂಭವಿಸಿದೆ. ನಿಗೂಢ ಸ್ಪೋಟಕ್ಕೆ 6-7 ಮನೆ ಛಿದ್ರ ಛಿದ್ರವಾಗಿದ್ದು, ಓರ್ವ ಬಾಲಕ ಮೃತಪಟ್ಟಿದ್ದಾರೆ. ಏಳೆಂಟು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನ ಚಿನ್ನಯ್ಯಪಾಳ್ಯದಲ್ಲಿ ನಡೆದ ನಿಗೂಢ ಸ್ಪೋಟ ಎಲ್ಲರನ್ನ ಬೆಚ್ಚಿ ಬೀಳಿಸಿದೆ. ಇದು ಸಿಲಿಂಡರ್ ಸ್ಪೋಟದಿಂದ ಆದ ಅವಘಡವೋ ಅಥವಾ ಬೇರೆ ಯಾವುದೋ ಕಾರಣ ಇದ್ಯೋ ಗೊತ್ತಿಲ್ಲ…..ಸ್ಥಳದಲ್ಲಿ ಪೊಲೀಸರು ಇಂಚಿಂಚೂ ಕೂಡ ಶೋಧ ನಡೆಸುತ್ತಿದ್ದಾರೆ.

‘ನಿಗೂಢ ಸ್ಪೋಟ’ ಕೇಸ್ ಕೆದಕಲು ಪೊಲೀಸರು ಮುಂದಾಗಿದ್ದು, ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದಲೂ ಶೋಧ ನಡೆಸಲಾಗುತ್ತದೆ. ಸ್ಥಳದಲ್ಲಿ ಯಾವುದಾದರೂ ಅನುಮಾನಾಸ್ಪದ ವಸ್ತುಗಳು ಸಿಗಬಹುದಾ ಎಂಬ ನಿಟ್ಟಿನಲ್ಲಿ ಭಾರಿ ಶೋಧ ನಡೆಸಲಾಗುತ್ತಿದೆ.

ಸ್ಪೋಟ ನಡೆದ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಿಎಂ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ.
ಸ್ಪೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಮುಬಾರಕ್ (8) ಮೃತಪಟ್ಟಿದ್ದಾನೆ. 12 ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗಾಯಾಳುಗಳನ್ನ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಸ್ತೂರಿ ಎಂಬುವವರ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡಿದೆ. ಒಂದು ಸಿಲಿಂಡರ್ ಸ್ಪೋಟಗೊಂಡು 6 -7 ಮನೆ ಛಿಧ್ರ ಛಿದ್ರವಾಗಿದ್ದು, ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read