ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಜೈಲು ಪಾಲಾಗಿದ್ದಾರೆ. ಜೈಲಿನಲ್ಲಿ ಒಂದು ದಿನ ಕಳೆದ ನಟ ದರ್ಶನ್ ಇಂದು ಬೆಳಗ್ಗೆ ಉಪ್ಪಿಟ್ಟು ಸೇವಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯನ್ನ ‘ದಾಸ’ ಜೈಲಿನಲ್ಲಿ ಆಚರಿಸುವ ಪರಿಸ್ಥಿತಿ ಬಂದಿದೆ.
ಪರಪ್ಪನ ಜೈಲು ಸೇರಿರುವ ನಟ ದರ್ಶನ್ ಹಾಗೂ ಪವಿತ್ರಾಗೌಡಗೆ ಜೈಲಿನ ಸಿಬ್ಬಂದಿಗಳು ಖೈದಿ ನಂಬರ್ ವಿತರಿಸಿದ್ದಾರೆ. ಎ1 ಆರೋಪಿ ಪವಿತ್ರಾಗೌಡಗೆ ವಿಚಾರಣಾಧೀನ ಸಂಖ್ಯೆ 7313, ಹಾಗೂ ಎ2 ಆರೋಪಿ ನಟ ದರ್ಶನ್ ಗೆ 7314 ನೀಡಲಾಗಿದೆ. ಅದೇ ರೀತಿ ಪ್ರದಷ್ ಗೆ 7317, ಲಕ್ಷ್ಮಣ್ ಗೆ 7316, ನಾಗರಾಜ್ ಗೆ 7315 ನೀಡಲಾಗಿದೆ.
ಪ್ರತಿವರ್ಷದಂತೆ ಈವರ್ಷವೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಆದರೆ ಜೈಲಿನಲ್ಲಿರುವ ನಟ ದರ್ಶನ್, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮಾತ್ರ ಭಾಗಿಯಾಗಿಲ್ಲ.ಅತ್ಯಾಚಾರ ಕೇಸ್ ನಲ್ಲಿ ಜೈಲುಪಾಲಾಗಿರುವ ಪ್ರಜ್ವಲ್ ರೇವಣ್ಣ, ಜೈಲಿನ ಆವರಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಿಲ್ಲ. ರೇಣುಕಾಸ್ವಾಮಿ ಹತ್ಯೆಕೇಸ್ ನಲ್ಲಿ ನಿನ್ನೆ ಮತ್ತೆ ಜೈಲು ಪಾಲಾಗಿರುವ ನಟ ದರ್ಶನ್, ಪವಿತ್ರಾ ಗೌಡ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ತಿಳಿದುಬಂದಿದೆ.
