ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI)ದಲ್ಲಿ ಮೀವು ಖಾತೆ ಹೊಂದಿದ್ದರೆ ಮುಖ್ಯವಾದ ಮಾಹಿತಿ ಇಲ್ಲಿದೆ. ಬ್ಯಾಂಕಿನ ಪ್ರಕಟಣೆಯ ಪ್ರಕಾರ, ಚಿಲ್ಲರೆ ಗ್ರಾಹಕರಿಗೆ IMPS(ತಕ್ಷಣದ ಪಾವತಿ ಸೇವೆ) ವಹಿವಾಟು ಶುಲ್ಕಗಳನ್ನು ಆಗಸ್ಟ್ 15 ರಿಂದ ಪರಿಷ್ಕರಿಸಲಾಗುವುದು. ಕಾರ್ಪೊರೇಟ್ ಗ್ರಾಹಕರಿಗೆ, ಬದಲಾವಣೆಗಳು ಸೆಪ್ಟೆಂಬರ್ 8 ರಿಂದ ಜಾರಿಗೆ ಬರಲಿವೆ. ಈ ಪರಿಷ್ಕರಣೆಗಳು ಸುಮಾರು 40 ಕೋಟಿ SBI ಗ್ರಾಹಕರ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.
25,000 ರೂ.ವರೆಗಿನ ವಹಿವಾಟುಗಳಿಗೆ ಯಾವುದೇ ಶುಲ್ಕವಿಲ್ಲ
ಇಂಟರ್ನೆಟ್ ಬ್ಯಾಂಕಿಂಗ್ ಅಥವಾ YONO ಅಪ್ಲಿಕೇಶನ್ ಬಳಸುವ ಚಿಲ್ಲರೆ ಗ್ರಾಹಕರಿಗೆ, 25,000 ರೂ.ವರೆಗಿನ ವಹಿವಾಟುಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. 25,000 ರೂ.ಗಿಂತ ಹೆಚ್ಚಿನ ವರ್ಗಾವಣೆಗಳಿಗೆ, ಶುಲ್ಕಗಳು ಅನ್ವಯಿಸುತ್ತವೆ:
25,000 ರೂ.ಗಳಿಂದ 1 ಲಕ್ಷ ರೂ.ಗಳವರೆಗೆ – ರೂ. 2 + ಜಿಎಸ್ಟಿ
1 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳವರೆಗೆ – ರೂ. 6 + ಜಿಎಸ್ಟಿ
2 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳವರೆಗೆ – ರೂ. 10 + ಜಿಎಸ್ಟಿ
ಶಾಖೆಯ ವಹಿವಾಟುಗಳಿಗೆ ವಿಭಿನ್ನ ನಿಯಮಗಳು
ನೀವು ಎಸ್‌ಬಿಐ ಶಾಖೆಯಲ್ಲಿ ವಹಿವಾಟು ನಡೆಸಿದರೆ, ರೂ. 1000 ವರೆಗಿನ ಮೊತ್ತಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಹೆಚ್ಚಿನ ಮೊತ್ತಕ್ಕೆ, ಶುಲ್ಕಗಳು ಹೀಗಿರುತ್ತವೆ:
1,000 ರೂ.ಗಳಿಂದ 10,000 ರೂ.ಗಳು – ರೂ. 2 + ಜಿಎಸ್‌ಟಿ
10,000 ರೂ.ಗಳಿಂದ 25,000 ರೂ.ಗಳು – ರೂ. 4 + ಜಿಎಸ್‌ಟಿ
25,000 ರೂ.ಗಳಿಂದ 1 ಲಕ್ಷ ರೂ.ಗಳು – ರೂ. 4 + ಜಿಎಸ್ಟಿ
1 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳು – ರೂ. 12 + ಜಿಎಸ್ಟಿ
2 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳು – ರೂ. 20 + ಜಿಎಸ್‌ಟಿ
ನಿರ್ದಿಷ್ಟ ಖಾತೆದಾರರಿಗೆ ವಿನಾಯಿತಿಗಳು
ಎಸ್‌ಬಿಐ ಆನ್‌ಲೈನ್ ವಿಧಾನಗಳ ಮೂಲಕ ವಹಿವಾಟು ನಡೆಸಿದಾಗ ಕೆಲವು ವಿಶೇಷ ವೇತನ ಖಾತೆಗಳಿಗೆ IMPS ಶುಲ್ಕಗಳನ್ನು ಮನ್ನಾ ಮಾಡಿದೆ. ಇವುಗಳಲ್ಲಿ ರಕ್ಷಣಾ ವೇತನ ಪ್ಯಾಕೇಜ್, ಪೊಲೀಸ್ ವೇತನ ಪ್ಯಾಕೇಜ್, ಕೇಂದ್ರ ಸರ್ಕಾರದ ವೇತನ ಪ್ಯಾಕೇಜ್ ಮತ್ತು ಶೌರ್ಯ ಕುಟುಂಬ ಪಿಂಚಣಿ ಖಾತೆಗಳು ಸೇರಿವೆ.
ಸೆಪ್ಟೆಂಬರ್ 8 ರಿಂದ ಕಾರ್ಪೊರೇಟ್ ಗ್ರಾಹಕರಿಗೆ ಅದೇ ಪರಿಷ್ಕೃತ ಶುಲ್ಕಗಳು ಅನ್ವಯವಾಗುತ್ತವೆ. ಆದಾಗ್ಯೂ, ಸರ್ಕಾರಿ ಇಲಾಖೆಗಳು ಮತ್ತು ಕಾನೂನು ಘಟಕಗಳ ಜೊತೆಗೆ ಚಿನ್ನ, ವಜ್ರ, ಪ್ಲಾಟಿನಂ ಮತ್ತು ರೋಡಿಯಂನಂತಹ ಕೆಲವು ಚಾಲ್ತಿ ಖಾತೆಗಳನ್ನು ಆನ್‌ಲೈನ್ ವಹಿವಾಟುಗಳಿಗೆ IMPS ಶುಲ್ಕಗಳಿಂದ ವಿನಾಯಿತಿ ನೀಡಲಾಗುತ್ತದೆ.