ಮಂಗಳೂರು: ಧರ್ಮಸ್ಥಳದ ವಿವಿಧೆಡೆ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ತೋರಿಸಿದ್ದ 13ನೇ ಸ್ಥಳದಲ್ಲಿ ಎಸ್ ಐಟಿ ತಂಡ ಶೋಧಕಾರ್ಯ ಮುಕ್ತಾಯಗೊಳಿಸಿದೆ.
ಎರಡು ದಿನಗಳಿಂದ ಎಸ್ ಐಟಿ ತಂಡ 13ನೇ ಪಾಯಿಂಟ್ ನಲ್ಲಿ ಉತ್ಖನನ ಮಾಡಿ ಅಸ್ಥಿಪಂಜರಗಳಿಗಾಗಿ ಶೋಧ ನಡೆಸಿದೆ. ಬರೋಬ್ಬರಿ 18 ಅಡಿ ಆಳ ಹಾಗೂ 32 ಅಡಿ ಉದ್ದ ಮಣ್ಣನ್ನು ಅಗೆಯಲಾಗಿದೆ. ಆದಾಗ್ಯೂ ಯಾವುದೇ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅಗೆದಿರುವ ಸ್ಥಳದಲ್ಲಿ ಮತ್ತೆ ಮಣ್ಣು ಮುಚ್ಚಿವ ಕೆಲಸ ನಡೆದಿದೆ.
ದೂರುದಾರ ತೋರಿಸಿರುವ 6ನೇ ಪಾಯಿಂಟ್ ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ಈವರೆಗೂ ಅಸ್ಥಿಪಂಜರ ಅಥವಾ ಮೂಳೆಗಳು ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ಎಸ್ ಐಟಿ ಅಧಿಕಾರಿಗಳ ಮುಂದಿನ ತನಿಖೆ ತೀವ್ರ ಕುತೂಹಲ ಕೆರಳಿಸಿದೆ.