BREAKING : ಬಂಡೀಪುರದಲ್ಲಿ ‘ಕಾಡಾನೆ’ ಜೊತೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ ‘ಜಸ್ಟ್ ಮಿಸ್’ ಆಗಿದ್ದ ವ್ಯಕ್ತಿಗೆ ಬಿತ್ತು 25,000 ದಂಡ.!

ಬಂಡೀಪುರದಲ್ಲಿ ಕಾಡಾನೆ ಜೊತೆ ‘ಸೆಲ್ಪಿ’ ಕ್ಲಿಕ್ಕಿಸಿದ ಪ್ರವಾಸಿಗನಿಗೆ ಅರಣ್ಯ ಇಲಾಖೆ 25,000 ರೂ ದಂಡ ವಿಧಿಸಿದೆ. ನಂಜನಗೂಡಿನ ಬಸವರಾಜು ಎಂಬುವವರು ಕಾಡಾನೆ ಜೊತೆ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಅಪಾಯಕ್ಕೆ ಸಿಲುಕಿದ್ದರು.

ವನ್ಯಜೀವಿಗಳಿಗೆ ತೊಂದರೆ ಕೊಡದಂತೆ, ಇನ್ನುಮುಂದೆ ಇಂತಹ ಕೆಲಸ ಮಾಡದಂತೆ ಮುಚ್ಚಳಿಕೆ ಬರೆಸಿಕೊಂಡು 25,000 ರೂ ದಂಡ ವಿಧಿಸಿದೆ.ಬಂಡೀಪುರದಲ್ಲಿ ‘ಸೆಲ್ಪಿ’ ಕ್ಲಿಕ್ಕಿಸಿಕೊಳ್ಳಲು ಬಂದ ಪ್ರವಾಸಿಗನನ್ನು ಕಾಡಾನೆಯೊಂದು ಅಟ್ಟಾಡಿಸಿ ತುಳಿದಿದ್ದು ಘಟನೆಯ ಭಯಾನಕ ವೀಡಿಯೋ ವೈರಲ್ ಆಗಿದೆ. ಅದೃಷ್ಟವಶಾತ್ ಪ್ರವಾಸಿಗ ಪ್ರಾಣಾಪಾಯದಿಂದ ಬದುಕುಳಿದಿದ್ದಾನೆ.

ವಾಹನಗಳು ಮತ್ತು ಜನರಿಂದ ತುಂಬಿದ್ದ ರಸ್ತೆಯಲ್ಲಿ ನಿಂತಿದ್ದ ಆನೆ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪ್ರವಾಸಿಗರ ಮೇಲೆ ಇದ್ದಕ್ಕಿದ್ದಂತೆ ಆನೆ ದಾಳಿ ನಡೆಸಿದೆ. ಕಾಡು ಆನೆಯನ್ನು ಕಂಡ ಆ ವ್ಯಕ್ತಿ ಪ್ರಾಣ ಉಳಿಸಿಕೊಳ್ಳಲು ಓಡುತ್ತಿರುವುದು ಕಂಡುಬರುತ್ತದೆ. ಸ್ವಲ್ಪ ಹೊತ್ತು ಬೆನ್ನಟ್ಟಿದ ನಂತರ, ಆ ವ್ಯಕ್ತಿ ಎಡವಿ ಬಿದ್ದನು, ಆ ಸಮಯದಲ್ಲಿ ಆನೆ ಅವನ ಮೇಲೆ ಕಾಲಿಟ್ಟಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read