ನವದೆಹಲಿ: ಜಗದೀಶಪುರ ಪ್ರದೇಶದ ಫಸಂಗಂಜ್ ಕಚ್ನಾವ್ ಗ್ರಾಮದಲ್ಲಿ ಶನಿವಾರ ರಾತ್ರಿ ಕೌಟುಂಬಿಕ ಕಲಹ ಹಿಂಸಾಚಾರಕ್ಕೆ ತಿರುಗಿದ್ದು, ಮಹಿಳೆಯೊಬ್ಬರು ತನ್ನ ಪತಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಜನನಾಂಗ ಕತ್ತರಿಸಿ ಹಾಕಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಘಟನೆ ನಡೆದಾಗ ಬಲಿಪಶು ಅನ್ಸರ್ ಅಹ್ಮದ್(38) ತನ್ನ ಎರಡನೇ ಪತ್ನಿ ನಜ್ನೀನ್ ಬಾನೊ ಜೊತೆ ತೀವ್ರ ಜಗಳವಾಡುತ್ತಿದ್ದ. ಸಬೆಜೂಲ್ ಮತ್ತು ನಜ್ನೀನ್ ಎಂಬ ಇಬ್ಬರು ಹೆಂಡತಿಯರಿದ್ದರೂ ಎರಡೂ ಮದುವೆಗಳಿಂದ ಮಕ್ಕಳಿಲ್ಲದ ಅಹ್ಮದ್, ಮನೆಯಲ್ಲಿ ಆಗಾಗ್ಗೆ ಜಗಳವಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಅಹ್ಮದ್ ಅವರನ್ನು ಜಗದೀಶಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ನಂತರ ಅವರನ್ನು ಉನ್ನತ ಚಿಕಿತ್ಸೆಗಾಗಿ ರಾಯ್‌ಬರೇಲಿಯದ ಏಮ್ಸ್‌ಗೆ ಕಳುಹಿಸಲಾಯಿತು.
ನಜ್ನೀನ್ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಜಗದೀಶ್‌ಪುರ ಎಸ್‌ಹೆಚ್‌ಒ ರಾಘವೇಂದ್ರ ತಿಳಿಸಿದ್ದಾರೆ.