ಬೆಳಗಾವಿ: ನಾಲ್ಕು ತಿಂಗಳ ಗರ್ಭಿಣಿ ಪತಿ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಮಚ್ಚೆ ಗ್ರಾಮದಲ್ಲಿ ನಡೆದಿದೆ.
ಅನಿತಾ (25) ಮೃತ ಮಹಿಳೆ. ಪತಿ ನಿಲೇಶ್ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅನಿತಾ ಶವ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಪತಿ ನಿಲೇಶ್ ನೇ ಪತ್ನಿಯನ್ನು ಕೊಲೆಗೈದು ನೇಣು ಬಿಗಿದಿದ್ದಾನೆ ಎಂದು ಅನಿತಾ ಪೋಷಕರು ಆರೋಪಿಸಿದ್ದಾರೆ. ಪಿಜ್ಜಾ ಹಟ್ ನಲ್ಲಿ ಕೆಲಸ ಮಡುತ್ತಿದ್ದ ಅನಿತಾ, ನಿಲೇಶ್ ನನ್ನು ಪ್ರೀತಿಸಿ ವಿವಾಹವಾಗಿದ್ದಳು. ನಾಲ್ಕು ತಿಂಗಳ ಗರ್ಭಣಿ ಈಗ ಏಕಾಏಕಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪತಿ ನಿಲೇಶ್ ನನ್ನು ವಶಕ್ಕೆ ಪಡೆದಿದ್ದಾರೆ.