ಹೈದರಾಬಾದ್: ಕೋರ್ಟ್ ಆವರಣದಲ್ಲಿಯೇ ಹೈಕೋರ್ಟ್ ವಕೀಲರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಹೈಕೋರ್ಟ್ ಆವರಣದಲ್ಲಿ ಬೆಂಚ್ ಮೇಲೆ ಕುಳಿತಿದ್ದ ವಕೀಲರೊಬ್ಬರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕುಸಿದು ಬೀಳುತ್ತಿದ್ದಂತೆ ಅವರ ಕೈಲಿದ್ದ ಮೊಬೈಲ್ ಕೆಳಗೆ ಬೀಳುತ್ತಿದ್ದಂತೆ ಗಮನಿಸಿದ ಅಕ್ಕಪಕ್ಕದಲ್ಲಿದ್ದ ಸಿಬ್ಬಂದಿ ಹಾಗೂ ಜನರು ಹೋಗಿ ನೋಡುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಈ ಆಘಾತಕಾರಿ ಘಟನೆ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೃತವಕೀಲರನ್ನು ಖಮ್ಮಂ ಜಿಲ್ಲೆಯ ಸಿಂಗರೇಣಿ ಮಂಡಲದ ಗೇಟ್ ಕರೆಪಲ್ಲಿ ಗ್ರಾಮದ ನಿವಾಸಿ 45 ವರ್ಷದ ಪರಸಾ ಅನಂತ ನಾಗೇಶ್ವರ್ ರಾವ್ ಎಂದು ಗುರುತಿಸಲಾಗಿದೆ.