ಬೆಂಗಳೂರು : ಬೆಂಗಳೂರಲ್ಲಿ ‘ಫ್ರೀಫ್ರೈರ್ ಗೇಮ್’ ಚಟಕ್ಕೆ ಬಾಲಕ ಬಲಿಯಾಗಿದ್ದು, ಕತ್ತುಸೀಳಿ ಹತ್ಯೆಗೈದ ಸೋದರ ಮಾವ ಅರೆಸ್ಟ್ ಆಗಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಈ ಘಟನೆ ನಡೆದಿದೆ. 14 ವರ್ಷದ ಬಾಲಕನೋರ್ವ ಫ್ರೀಫ್ರೈರ್ ಗೇಮ್’ ಚಟಕ್ಕೆ ಬಿದ್ದಿದ್ದನು. ಆಟ ಆಡಲು ಮಾವನಿಂದ ಪದೇ ಪದೇ ಹಣ ಕೇಳುತ್ತಿದ್ದನು. ಇದರಿಂದ ರೊಚ್ಚಿಗೆದ್ದ ಆರೋಪಿ ನಾಗಪ್ರಸಾದ್ 14 ವರ್ಷದ ಬಾಲಕ ಅಮೋಘ್’ನ ಕತ್ತು ಸೀಳಿ ಹತ್ಯೆಗೈದಿದ್ದಾನೆ. 8 ತಿಂಗಳಿನಿಂದ ಮಾವ ನಾಗಪ್ರಸಾದ್ ಜೊತೆ ಬಾಲಕ ಅಮೋಘ ಕೀರ್ತಿ ವಾಸವಿದ್ದನು.
ಮಾವ ನಾಗಪ್ರಸಾದ್ ಜೊತೆಗೆ ವಾಸವಾಗಿದ್ದ ಬಾಲಕ .ಫ್ರೀ ಫೈರ್ ಗೇಮ್ ಚಟಕ್ಕೆ ಬಿದ್ದಿದ್ದ. ಮಾವನಿಗೆ ಪದೇ ಪದೇ ಹಣ ಕೇಳುತ್ತಿದ್ದ. ಇದರಿಂದ ಸಿಟ್ಟಿಗೆದ್ದ ನಾಗಪ್ರಸಾದ್ ಸೋಮವಾರ ರಾತ್ರಿ ತಂಗಿ ಮಗನ ಕತ್ತು ಸೀಳಿ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಬೆಂಗಳೂರಿನ ವಾಯುವ್ಯ ವಿಭಾಗದ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆನ್ಸೆನ್ ಚಟಕ್ಕೆ ಬಿದ್ದು ಹಣಕ್ಕಾಗಿ ಪೀಡಿಸುತ್ತಿದ್ದ ತಂಗಿ ಮಗನ ಕಾಟ ಸಹಿಸಲಾರದೆ ನಾಗಪ್ರಸಾದ್ ಕೊಲೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ.