SHOCKING : ಪ್ರೀತಿ ನಿರಾಕರಿಸಿದ ಸ್ನೇಹಿತನ ಪತ್ನಿಯನ್ನು ಕೊಂದು ಬೆಂಗಳೂರಲ್ಲಿ ‘ಪಾಗಲ್ ಪ್ರೇಮಿ’ ಆತ್ಮಹತ್ಯೆ.!

ಬೆಂಗಳೂರು : ಪ್ರೀತಿ ನಿರಾಕರಿಸಿದ ಸ್ನೇಹಿತನ ಪತ್ನಿಯನ್ನು ಕೊಂದು ಪಾಗಲ್ ಪ್ರೇಮಿಯೋರ್ವ ನೇಣಿಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕೊಲೆಯಾದವರನ್ನು ತಿರುಪಾಳ್ಯದ ಮಂದಿರಾ ಮಂಡೆಲ್ (29) ಎಂದು ಗುರುತಿಸಲಾಗಿದೆ . ಹತ್ಯೆ ಬಳಿಕ ಆಕೆಯ ಮನೆಯಲ್ಲೇ ಮೃತಳ ಪತಿಯ ಸ್ನೇಹಿತ ಸುಮನ್ ಮಂಡೆಲ್ (30) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚಾಕುವಿನಿಂದ ಇರಿದು ಮಂಡೆಲ್ ಕೊಂದಿದ್ದಾನೆ. ನಂತರ ತಾನು ಬೆಡ್ ರೂಮ್‌ನಲ್ಲಿ ಆಕೆಯ ದುಪ್ಪಟ್ಟದಿಂದ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಪಶ್ಚಿಮ ಬಂಗಾಳದ ಬಿಜು ಮಂಡೆಲ್ ಹಾಗೂ ಮಂದಿರಾ ಮದುವೆಯಾಗಿದ್ದರು. ಅವರಿಗೆ 6 ವರ್ಷದ ಮಗನಿದ್ದನು. ಅಂಡಮಾನ್‌ನಲ್ಲಿ ದಂಪತಿ ಕೆಲಸ ಮಾಡುತ್ತಿದ್ದರು. ಆದರೆ, 2 ವರ್ಷದ ಹಿಂದೆ ಯಾವುದೋ ಕಾರಣಕ್ಕೆ ಇಬ್ಬರು ಪ್ರತ್ಯೇಕವಾಗಿದ್ದರು.

ಪತಿಯಿಂದ ದೂರವಿದ್ದ ಮಂದಿರಾ 6 ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಳು.
ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಸುಮನ್ ಹಾಗೂ ಮಂದಿರಾಳ ಪತಿ ಬಿಜು ಸ್ನೇಹಿತರಾಗಿದ್ದರು.
ಪತಿಯಿಂದ ಪ್ರತ್ಯೇಕವಾಗಿದ್ದ ಮಂದಿರಾಳ ಹಿಂದೆ ಸುಮನ್ ಬಿದ್ದಿದ್ದ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ನಡೆದಿತ್ತು ಎಂದು ತಿಳಿದು ಬಂದಿದೆ. ಅದು ಈಗ ಕೊಲೆಯಲ್ಲಿ ಅಂತ್ಯವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read