ಬೆಂಗಳೂರು : ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಸಾರಿಗೆ ನೌಕರರು ಇಂದಿನಿಂದ ಮುಷ್ಕರ ಕೈಗೊಂಡಿದ್ದಾರೆ. ಮುಷ್ಕರದ ನಡುವೆ ಸಾರಿಗೆ ಬಸ್ ಸಂಚರಿಸಿದ್ದು, ಕೋಲಾರ, ಕೊಪ್ಪಳದಲ್ಲಿ ಬಸ್ ಗೆ ಕಲ್ಲು ತೂರಲಾಗಿದೆ.
ಕೋಲಾರದಲ್ಲಿ ಕೆಎಸ್ ಆರ್ ಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕೋಲಾರದ ಬಸ್ ನಿಲ್ದಾಣದಲ್ಲಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.
ಹಾಗೂ ಕೊಪ್ಪಳದಲ್ಲಿ ಕೆಎಸ್ಆರ್ಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಗೆ ಕಲ್ಲು ತೂರಲಾಗಿದೆ. ತಡರಾತ್ರಿ ಯಲಬುರ್ಗಾದಿಂದ ಬೆಂಗಳೂರಿಗೆ ಹೊರಟಿದ್ದ ಬಸ್ ಮಸಹಂಚಿನಹಾಳ ಸಮೀಪ ಬರುತ್ತಿದ್ದಂತೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ಬಸ್ ನ ಗಾಜು ಪುಡಿಯಾಗಿದೆ. ಕಲ್ಲು ತೂರಾಟದ ನಂತರ ಚಾಲಕ ಡಿಪೋಗೆ ಬಸ್ ಕೊಂಡೊಯ್ದಿದ್ದಿದ್ದಾರೆ. ಇದರಿಂದಾಗಿ ಪ್ರಯಾಣಿಕರು ಪರದಾಡಿದ್ದಾರೆ.
TAGGED:ಮುಷ್ಕರ