ಹೋಮ್- ಸ್ಟೇ ನಿರ್ಮಿಸಲು / ನವೀಕರಿಸಲು ಸಹಾಯಧನ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು :    ಪ್ರವಾಸೋದ್ಯಮ ಇಲಾಖೆಯ ವತಿಯಿಂದ 2024 25ನೇ ಸಾಲಿನಲ್ಲಿ Dharti Aaba Janjatiya Gram Utkarsh Abhiyan (DA-JGUA) ಯೋಜನೆಯಡಿಯಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ನೆಲಗುಳ್ಳಿ ಗ್ರಾಮ ಪಂಚಾಯಿತಿಯ ನಾಗನಾಯಕನಹಳ್ಳಿ ಗ್ರಾಮ ಮತ್ತು ಯಲಹಂಕ ತಾಲ್ಲೂಕಿನ ಮೀನಕುಂಟೆ ಗ್ರಾಮ ಪಂಚಾಯಿತಿಯ ಚೆನ್ನಹಳ್ಳಿ ಗ್ರಾಮದಲ್ಲಿರುವ ಬುಡಕಟ್ಟು ಸಮುದಾಯದವರು ಪ್ರವಾಸಿಗರಿಗೆ ಅನುಕೂಲವಾಗುವಂತೆ ಹೋಮ್- ಸ್ಟೇ ನಿರ್ಮಿಸಲು / ನವೀಕರಿಸಲು ಆಸಕ್ತ ಅಭ್ಯರ್ಥಿಗಳಿಂದ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳಾದ ಹೋಮ್ ಸ್ಟೇ ನಿರ್ಮಿಸುವ/ಉನ್ನತೀಕರಿಸುವ ಯೋಜನಾ ವರದಿ (ಅಂದಾಜು ಪಟ್ಟಿಯೊಂದಿಗೆ), ಬುಡಕಟ್ಟು ಸಮುದಾಯದ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಗುರುತಿನ ಚೀಟಿ (ಆಧಾರ್/ವೋಟರ್ ಐಡಿ), ಮನೆ/ಹೋಂ ಸ್ಟೇ ಭೂ ದಾಖಲೆ (ಖಾತೆ, Demand Register, RTC/ಪಹಣಿ), ಮನೆ/ಹೋಂಸ್ಟೇಯ ಫೋಟೋಗಳು ಒಳಾಂಗಣ/ಹೊರಾಂಗಣ ಚಿತ್ರಗಳು (ಕೋಣೆಗಳು, ಶೌಚಾಲಯ, ಮುಂತಾದವು), ಹೊರಾಂಗಣದ ಚಿತ್ರಗಳು (ಬಾಹ್ಯ ನೋಟ, ಪ್ರವೇಶ ದ್ವಾರಗಳು), ನವೀಕರಣ ಅಗತ್ಯವಿರುವ ಭಾಗಗಳ ಛಾಯಾಚಿತ್ರಗಳು, ಬ್ಯಾಂಕ್ ಪಾಸ್ ಬುಕ್ ಪ್ರತಿ (ಖಾತೆದಾರರ ಹೆಸರು, IFSC ಕೋಡ್, ಬ್ಯಾಂಕ್ ಹೆಸರು ಸ್ಪಷ್ಟವಾಗಿ ಕಾಣಬೇಕು), ಗ್ರಾಮ ಪಂಚಾಯಿತಿ/ಸ್ಥಳೀಯ ಸಂಸ್ಥೆಯ ಶಿಫಾರಸು ಪತ್ರ. (ಯೋಜನೆಯ ಅವಶ್ಯಕತೆ ಬಗ್ಗೆ ಶಿಫಾರಸ್ಸು ಪತ್ರ), ಘೋಷಣೆ ಪತ್ರ (Affidavit-RS-100) (ನೀಡಲಾಗುತ್ತಿರುವ ಮಾಹಿತಿಯ ಧೃಡೀಕರಣ ಹಾಗೂ ಯೋಜನೆಯ ಮಾರ್ಗಸೂಚಿಗೆ ಅನುಗುಣವಾಗಿ ಹಣ ಬಳಸುವೆ ಎಂಬುದರ ಘೋಷಣೆ ಪತ್ರ).

ಆಸಕ್ತ ಬುಡಕಟ್ಟು ಸಮುದಾಯದವರು ಉಪ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ವಿಭಾಗ ನಂ 54, 5ನೇ ಮಹಡಿ, ಇಂಧನ ಭವನ, ರೇಸ್ ಕೋರ್ಸ್ ರಸ್ತೆ, ರಿನೇಸನ್ಸ್ ಹೋಟೆಲ್ ಎದುರು, ಬೆಂಗಳೂರು-560 009 ಇಲ್ಲಿ ಆಗಸ್ಟ್ 08,2025 ರೊಳಗಾಗಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:080-22362929 ಗೆ ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read