BIG NEWS: ರೈಲ್ವೆ ಭದ್ರತಾಪಡೆಯ ಮೊದಲ ಮಹಿಳಾ ಮಹಾನಿರ್ದೇಶಕಿಯಾಗಿ ಸೋನಾಲಿ ಮಿಶ್ರಾ ಅಧಿಕಾರ ಸ್ವೀಕಾರ

ನವದೆಹಲಿ: ರೈಲ್ವೆ ಭದ್ರತಾಪಡೆಯ (ಆರ್.ಪಿ.ಎಫ್) ಮಹಾನಿರ್ದೇಶಕಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಸೋನಾಲಿ ಮಿಶ್ರಾ ಅಧಿಅಕರ ಸ್ವೀಕರಿಸಿದ್ದಾರೆ. ಈ ಮೂಲಕ ಅವರು ಆರ್.ಪಿ.ಎಫ್ ನ ಮೊದಲ ಮಹಿಳಾ ಮಹಾನಿರ್ದೇಶಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮನೋಜ್ ಯಾದವ್ ಅವರಿಂದ ತೆರವಾದ ಸ್ಥಾನಕ್ಕೆ ಐಪಿಎಸ್ ಅಧಿಕಾರಿ ಸೋನಾಲಿ ಮಿಶ್ರಾ ಅವರನ್ನು ಆರ್.ಪಿ.ಎಫ್ ಮಹಾನಿರ್ದೇಶಕಿಯಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಜುಲೈ 14ರಂದು ಆದೇಶ ಹೊರಡಿಸಿತ್ತು.

ಇದಕ್ಕೂ ಮುನ್ನ ಸೋನಾಲಿ ಮಿಶ್ರಾ ಮಧ್ಯಪ್ರದೇಶದ ಪೊಲೀಸ್ ಇಲಕಹೆಯಲ್ಲಿ ಹೆಚ್ಚುವರಿ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೋನಾಲಿ ಮಿಶ್ರಾ 2026ರ ಅಕ್ಟೋಬರ್ 31ವರೆಗೆ ರೈಲ್ವೆ ಭದ್ರತಾ ಪಡೆಯ ಮಹಾನಿರ್ದೇಶಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read