ಬೆಂಗಳೂರು: ರಾಜ್ಯದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಆರೋಪ ಕೇಳಿ ಬಂದ ಬೆನ್ನಲ್ಲೇ 2025- 26 ನೇ ಸಾಲಿನಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಅಗತ್ಯವಿರುವ 883 ರೀತಿಯ ಔಷಧಿ ಖರೀದಿಸಲು 880.68 ಕೋಟಿ ಮೊತ್ತದ ಔಷಧ ಖರೀದಿ ಪ್ರಕ್ರಿಯೆಗೆ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ.
ರಾಜ್ಯದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪ್ರಸ್ತುತ ಲಭ್ಯವಿರುವ 564 ರೀತಿಯ ಔಷಧಗಳು ಹಾಗೂ ವಿವಿಧ ಬೇಡಿಕೆಗಳಿಗೆ ಅನುಸಾರವಾಗಿ ಪ್ರಸ್ತುತ ಲಭ್ಯತೆ ಇಲ್ಲದ 319 ರೀತಿಯ ಔಷಧಗಳು ಸೇರಿದಂತೆ 883 ರೀತಿಯ ಔಷಧಿಗಳನ್ನು ಕೆಟಿಪಿಪಿ ಕಾಯ್ದೆ 1999 ಕೆಟಿಪಿಪಿ ನಿಯಮ 2000 ಮೂಲಕ ಖರೀದಿಸಿ ಪೂರೈಸುವಂತೆ ಆರೋಗ್ಯ ಇಲಾಖೆಯಿಂದ ರಾಜ್ಯ ವೈದ್ಯಕೀಯ ಸರಬರಾಜು ನಿಗಮಕ್ಕೆ ಸೂಚನೆ ನೀಡಲಾಗಿದೆ.