ಮಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ತೀರಿಸಿರುವ ಮೂರು ಸ್ಥಳಗಳಲ್ಲಿ ಎಸ್ ಐಟಿ ತಂಡದಿಂದ ಶೋಧಕಾರ್ಯ ಮುಕ್ತಾಯವಾಗಿದೆ.
ಧರ್ಮಸ್ಥಳದ ವಿವಿಧೆಡೆ ನೂರಾರು ಶವಗಳನ್ನು ಹೂತಿಟ್ಟ ಬಗ್ಗೆ ದೂರುದಾರರೊಬ್ಬರು ತಪ್ಪೊಪ್ಪಿಕೊಂಡಿದ್ದು, ಈ ಬಗ್ಗೆ ಎಸ್ ಐಟಿ ತಂಡ ಶೋಧಕಾರ್ಯ ನಡೆಸಿದೆ. ದೂರುದಾರ ನೀಡಿರುವ 13 ಸ್ಥಳಗಳ ಪೈಕಿ ಈಗಾಗಲೇ 3 ಸ್ಥಳಗಳಲ್ಲಿ ಮಣ್ಣು ಅಗೆದು ಶೋಧ ನಡೆಸಲಾಗಿದೆ. ಇದೀಗ ನಾಲ್ಕನೇ ಸ್ಥಳದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಧರ್ಮಸ್ಥಳದ ಬಂಗ್ಲಗುಡ್ಡದಲ್ಲಿ ಅಸ್ಥಿಪಂಜರಗಳಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದ್ದು, ಎಸ್ ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
TAGGED:ಧರ್ಮಸ್ಥಳ ಪ್ರಕರಣ