BIG NEWS: ಇಬ್ಬರು ಮನೆ ಮಾಲೀಕರ ನಡುವೆ ಜಗಳ: PSI ದರ್ಪಕ್ಕೆ ಶಾಶ್ವತವಾಗಿ ಕಿವುಡನಾದ ಬಾಡಿಗೆದಾರ

ಬೆಂಗಳೂರು: ಇಬ್ಬರು ಮನೆ ಮಾಲೀಕರ ಜಗಳದಲ್ಲಿ ಪಿಎಸ್ ಐ ಓರ್ವರು ಬಾಡಿಗೆದಾರನ ಮೇಲೆ ಹಲ್ಲೆ ನಡೆಸಿದ್ದು, ಬಾಡಿಗೆದಾರನ ಕಿವಿ ಶಾಶ್ವತವಾಗಿ ಕಿವುಡಾಗಿರುವ ಆರೋಪ ಕೇಳಿಬಂದಿದೆ.

ಬೇಗೂರು ಪಿಎಸ್ ಐ ಪುನೀತ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ೌದಯ್ ಎಂಬ ಬಾಡಿಗೆದಾರನನ್ನು ಅನಗತ್ಯವಾಗಿ ಠಾಣೆಗೆ ಕರೆದು ಪಿಎಸ್ ಐ ಪುನೀತ್, ಅವಾಚ್ಯವಾಗಿ ನಿಂದಿಸಿ, ಕಾಲಿನಿಂದ ಒದ್ದು, ಕಪಾಳಕ್ಕೆ ಬಾರಿಸಿದ್ದಾರೆ. ಇದರಿಂದ ಉದಯ್ ಅವರ ಎಡಕಿವಿ ಸಂಪೂರ್ಣ ಕಿವುಡಾಗಿದ್ದು, ಶ್ರವಣದೋಷವುಂಟಾಗಿದೆ.

ಈ ಬಗ್ಗೆ ಹಲ್ಲೆಗೊಳಗಾಗಿರುವ ಉದಯ್ ಪರ ವಕೀಲರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಇಬ್ಬರು ಮನೆ ಮಾಲೀಕರ ನಡುವೆ ನಡೆದ ಜಗಳದ ವಿಚಾರವಗಿ ಪಿಎಸ್ ಐ ಪುನೀತ್ ಉದಯ್ ಎಂಬುವವರನ್ನು ಠಾಣೆಗೆ ಕರೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read