ಮಂಗಳೂರು : ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆಯನ್ನ ಎಸ್ ಐ ಟಿ ನಡೆಸುತ್ತಿದ್ದು, ದೂರುದಾರ ಶನಿವಾರ ಎಸ್ ಐ ಟಿ ಎದುರು ವಿಚಾರಣೆಗೆ ಹಾಜರಾಗಿದ್ದಾನೆ. ರಾಜ್ಯ ಸರ್ಕಾರ ನಿಯೋಜಿಸಿರುವ ಎಸ್ ಐ ಟಿ ( ವಿಶೇಷ ತನಿಖಾ ತಂಡ) ದ ಎದುರು ಈತ ವಿಚಾರಣೆಗೆ ಹಾಜರಾಗಿದ್ದಾನೆ.
ಕದ್ರಿಯಲ್ಲಿರುವ ಐಬಿ ಕಚೇರಿಯಲ್ಲಿ ತೆರೆದಿರುವ ಎಸ್ ಐ ಟಿ ಕಚೇರಿಗೆ ದೂರುದಾರ ತನ್ನ ವಕೀಲರ ಜೊತೆ ಆಗಮಿಸಿದ್ದಾನೆ. ಡಿಐಜಿ ಎಂಎನ್ ಅನುಚೇತ್ ಸಮ್ಮುಖದಲ್ಲಿ ದೂರುದಾರನ ವಿಚಾರಣೆ ನಡೆಯಲಿದೆ.
ಎಸ್ ಐ ಟಿ ರಚನೆ
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಪತ್ರದಲ್ಲಿ ಪ್ರಸ್ತಾಪಿಸಿರುವ ಅಂಶಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆ, ಧರ್ಮಸ್ಥಳ ಪೊಲೀಸ್ ಠಾಣೆ ಮೊ.ಸಂ. 39/2025 ಕಲಂ 211(ಎ), ಬಿ.ಎನ್.ಎಸ್. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಯನ್ನು ಕೈಗೊಳ್ಳಲು ಒಂದು ವಿಶೇಷ ತನಿಖಾ ತಂಡ (Special Investigation Team)ವನ್ನು ರಚಿಸುವುದು ಸೂಕ್ತವೆಂದು ಸರ್ಕಾರವು ತೀರ್ಮಾನಿಸಿ ಸರ್ಕಾರ ಎಸ್ಐಟಿ ರಚಿಸಿ ಆದೇಶಿಸಿದೆ.
You Might Also Like
TAGGED:ಧರ್ಮಸ್ಥಳ