ಚಿಕ್ಕಮಗಳೂರು: ತಂದೆಯೊಂದಿಗೆ ಜಗಳವಾಡಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನು ರಕ್ಷಿಸಿರುವ ಘಟನೆ ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ.
ಇಲ್ಲಿನ ಬಾಳೆಹೊನ್ನೂರು ಬಳಿ ಈ ಘಟನೆ ನಡೆದಿದೆ. ಅನಿಕೇತ್ (27) ರಕ್ಷಿಸಲ್ಪಟ್ಟ ಯುವಕ. ತಂದೆಯ ಜೊತೆ ಜಗಳವಾಡಿದ್ದ ಅನಿಕೇತ್ ಭದ್ರಾ ನದಿಗೆ ಜಿಗಿದಿದ್ದ. ಭಾರಿ ಮಳೆಯಿಂದಾಗಿ ಭದ್ರತಾ ನದಿ ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು, ಅಪಾಯವನ್ನೂ ಲೆಕ್ಕಿಸದೇ ಆನೆ ಕಾರ್ಯಪಡೆ ಸಿಬ್ಬಂದಿಗಳು ಯುವಕನನ್ನು ರಕ್ಷಿಸಿದ್ದಾರೆ.
ನದಿಗೆ ಹಾರಿದ್ದ ಯುವಕ ಅನಿಕೇತ್ ನನ್ನು ಹಗ್ಗದ ಸಹಾಯದಿಂದ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.