ರಾಯಚೂರು: ಪತಿಯನ್ನು ನದಿಗೆ ತಳ್ಳಿ ಪತ್ನಿಯೇ ಕೊಲೆಗೆ ಯತ್ನಿಸಿದ್ದ ಪ್ರಕರಣ ತಿರುವುಗಳ ಮೇಲೆ ತಿರುವು ಪಡೆದುಕೊಳ್ಳುತ್ತಿದೆ. ಪತಿ ತಾತಪ್ಪ ವಿರುದ್ಧ ಇದೀಗ ಪೋಕ್ಸೋ ಕೇಸ್ ದಾಖಲಾಗಿದೆ.
ಕೆಲ ದಿನಗಳ ಹಿಂದೆ ತಾತಪ್ಪ ಎಂಬಾತ ಪತ್ನಿ ತನನ್ನು ಸೇತುವೆಯಿಂದ ನದಿಗೆ ತಳ್ಳಿದ್ದಾಳೆ. ಫೋಟೋ ಕ್ಲಿಕ್ಕಿಸುವ ನೆಪದಲ್ಲಿ ಸೇತುವೆ ಬಳಿ ಕರೆದುಕೊಂಡು ಬಂದಿ ನನ್ನನ್ನು ನದಿಗೆ ತಪ್ಪಿ ಕೊಲೆಗೆ ಯತ್ನಿಸಿದ್ದಾಳೆ ಎಂದು ನಾಟಕವಾಡಿದ್ದ ತಾತಪ್ಪ, ವಿರುದ್ಧ ಈಗಾಗಲೇ ಬಾಲ್ಯ ವಿವಾಹ ಪ್ರಕರಣ ದಾಖಲಾಗಿದೆ. ಇದೀಗ ತಾತಪ್ಪ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.
15 ವರ್ಷದ 8 ತಿಂಗಳ ಹುಡುಗಿಯನ್ನು ತಾತಪ್ಪ ಬಾಲ್ಯ ವಿವಾಹವಾಗಿದ್ದ. ಈ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗ ರಾಯಚೂರು ಜಿಲ್ಲಾಡಳಿತ, ತಾಲೂಕು ಆಡಲಿತ ಅಧಿಕಾರಗಳ ವಿರುದ್ಧ ಕಿಡಿಕಾರಿತ್ತು. ಈ ಬಗ್ಗೆ ದಾಖಲೆಪತ್ರಗಳನ್ನು ಪರಿಶೀಲಿಸಲು ಸೂಚಿಸಿತ್ತು. ತಾತಪ್ಪ ಪತ್ನಿಯ ಶಾಲೆಯ ದಾಖಲಾತಿಗಳನ್ನು ಪರೀಶಿಲಿಸಿದಾಗ ಹಾಗೂ ಆಕೆಯ ಹೇಳಿಕೆ ಪರಿಶೀಲಿಸಿದಾಗ ಬಾಲ್ಯವಿವಾಹವಾಗಿರುವುದು ದೃಧಪಟ್ಟಿತ್ತು. ಈ ಹಿನ್ನೆಲೆಯಲ್ಲಿ ತಾತಪ್ಪ ಹಾಗೂ ಕುಟುಂಬದ ವಿರುದ್ಧ ಬಾಲ್ಯವಿವಾಹ ಕೇಸ್ ದಾಖಲಾಗಿತ್ತು.
ಇದೀಗ ಈ ಪ್ರಕರಣದಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ರಾಯಚೂರು ಮಹಿಳಾ ಠಾಣೆಯಲ್ಲಿ ತಾತಪ್ಪ ಹಾಗೂ ಕುಟುಂಬದ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ತಾತಪ್ಪ ಪತ್ನಿ ಹೇಳಿಕೆ ಪಡೆದು ಪ್ರಕರಣ ದಾಖಲಿಸಲಾಗಿದ್ದು, ತಾತಪ್ಪನಿಗೆ ಜೈಲೂಟ ಬಹುತೇಕ ಫಿಕ್ಸ್ ಆಗಿದೆ.