ಬೆಂಗಳೂರು : ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಬಿ-ಖಾತಾ ನಿವೇಶನಗಳಿಗೆ ಎ-ಖಾತಾ ನೀಡುವ ಕುರಿತು ಜು.17ರ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಏನಿದೆ ಹೊಸ ಆದೇಶದಲ್ಲಿ..?
1) ಬಿ.ಬಿ.ಎಂ.ಪಿ.ಗೆ ಸಂಬಂಧಿಸಿದಂತೆ ಅನುಬಂಧ-1 ರಲ್ಲಿ ಒಳಗೊಂಡಿರುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
(2) ಎ ಮತ್ತು ಬಿ ಖಾತಾ ಎಂಬ ಪರಿಕಲ್ಪನೆ ಮೇರೆಗೆ ತಂದ ತಿದ್ದುಪಡಿ ಆಧಾರದ ಮೇಲೆ 2009 ರ ಅವಧಿಯೊಳಗೆ ನೀಡಲಾದ ಎ-ಖಾತಾ ಅಥವಾ ಸಾಮಾನ್ಯ ಖಾತಾಗಳು ಮತ್ತು ಈ ತಿದ್ದುಪಡಿಯ ಪೂರ್ವದಲ್ಲಿ, ಅನಧಿಕೃತ ಆಸ್ತಿಗಳು ಬಿ-ಖಾತಾವನ್ನು ಪಡೆಯುವ ಬಗ್ಗೆ ಯಾವುದೇ ಪರಿಕಲ್ಪನೆ ಇಲ್ಲದಿದ್ದರಿಂದ, ಸದರಿ ತಿದ್ದುಪಡಿಯ ಮುನ್ನ, ಆ ಸಮಯದಲ್ಲಿ ಜಾರಿಯಲ್ಲಿದ್ದ ಸುತ್ತೋಲೆಗಳ ಆಧಾರದ ಮೇಲೆ ನೀಡಲಾಗಿರುವ, ಎಲ್ಲಾ ಖಾತಾಗಳನ್ನು ಎಲ್ಲಾ ಕಾನೂನು ಉದ್ದೇಶಗಳಿಗೆ ಅಧಿಕೃತ ಮತ್ತು ಎ-ಖಾತಾ ಎಂದು ಪರಿಗಣಿಸಲು ಅನುಮೋದನೆ ನೀಡಿದೆ.
ಮೇಲೆ ಓದಲಾದ ದಿನಾಂಕ: 22-05-2025ರ ಪತ್ರದಲ್ಲಿ, ಬೆಂಗಳೂರು ನಗರವು ದೇಶದಲ್ಲಿಯೇ ಅತ್ಯಂತ ವೇಗವಾಗಿ ವಿಸ್ತಾರಗೊಳ್ಳುತ್ತಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ನಗರವಾಗಿರುತ್ತದೆ. ನಗರವು ಎದುರಿಸಬೇಕಾದ ಸವಾಲುಗಳು ಮತ್ತು ಅದರ ವ್ಯವಸ್ಥಿತ ಮತ್ತು ಸಂಘಟಿತ ಬೆಳವಣಿಗೆ, ಅಭಿವೃದ್ಧಿಯ ಅಗತ್ಯತೆಯನ್ನು ಕಡೆಗಣಿಸುವಂತಿಲ್ಲ. ಅನಿಯಂತ್ರಿತ ಮತ್ತು ಅವ್ಯವಸ್ಥಿತವಾದ ಬೆಳವಣಿಗೆಯು, ಈಗ ನಗರವು ಎದುರಿಸುತ್ತಿರುವ ಹೆಚ್ಚಿನ ತೊಂದರೆಗಳು ಅಂದರೆ, ಅಸುರಕ್ಷತೆ ಮತ್ತು ಅನಿಯಂತ್ರಿತ ನಿರ್ಮಾಣಗಳು, ಅಸುರಕ್ಷಿತ ಕಟ್ಟಡಗಳಿಂದ ಪ್ರಾಣಕ್ಕೆ ತೊಂದರೆ, ಕಳಪೆ ನಾಗರಿಕ ಸೌಕರ್ಯಗಳು, ಪ್ರವಾಹ ಮತ್ತು ಇಕ್ಕಟ್ಟು ಬೀದಿಗಳಿಂದ ಉಸಿರುಗಟ್ಟುವಿಕೆ, ಕಾವೇರಿ ನೀರು ಸರಬರಾಜು ಮಾಡುವ ಸವಾಲು, ಇತ್ಯಾದಿ ತೊಂದರೆಗಳಿಗೆ ದಾರಿ ಮಾಡಿಕೊಟ್ಟಿರುತ್ತದೆ.
ಅನಧಿಕೃತ ಕಟ್ಟಡಗಳು ಮತ್ತು ಯೋಜಿತವಲ್ಲದ ಅಭಿವೃದ್ಧಿಯಿಂದ ಲಕ್ಷಾಂತರ ಸ್ವತ್ತುಗಳಿಗೆ ‘ಬಿ’ ಖಾತಾ ನೀಡಲು ಕಾರಣವಾಗಿದ್ದು, ಇದನ್ನು ನಿಯಂತ್ರಿಸಿ, ಹಿಡಿತದಲ್ಲಿಡಬೇಕಾಗಿರುತ್ತದೆ. ಪ್ರಸ್ತುತ, ‘ಬಿ’ ಖಾತಾ ಆಸ್ತಿಯು, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 (ಕೆ.ಟಿ.ಸಿ.ಪಿ. ಕಾಯ್ದೆ)ಯ ವೀಕ್ಷಣೆ ಮತ್ತು ವ್ಯಾಪ್ತಿಯ ಹೊರಗಿರುತ್ತದೆ. ‘ಬಿ’ ಖಾತಾ ಆಸ್ತಿಗಳಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ನಿಯಂತ್ರಿಸಲಾಗದೆ, ಅದು ಪೂರ್ಣ ಪ್ರಮಾಣದಲ್ಲಿ ನಿಯಮಗಳ ಉಲ್ಲಂಘನೆಯಾಗಿ, ಅಸುರಕ್ಷಿತ ಕಟ್ಟಡಗಳ ನಿರ್ಮಾಣಕ್ಕೆ ಕಾರಣವಾಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ‘ಬಿ’ ಖಾತಾ ಆಸ್ತಿಗಳಲ್ಲಿ ನಿರ್ಮಿಸಿದ್ದ ಕಟ್ಟಡಗಳು ಕುಸಿದು ಬಿದ್ದು, ಕೆ.ಟಿ.ಸಿ.ಪಿ ಕಾಯ್ದೆ, 1961ರ ವಿರುದ್ಧವಾಗಿ, ನಿಯಂತ್ರಣವಿಲ್ಲದೆ ನಿರ್ಮಿಸಲಾಗಿರುತ್ತವೆ. ಇಂತಹ ಆಸ್ತಿಗಳು ಸಾಮಾನ್ಯವಾಗಿ ಎಲ್ಲಾ ಸೌಲಭ್ಯಗಳನ್ನು ಅಂದರೆ ರಸ್ತೆ, ಮೋರಿ ಮತ್ತು ಇತರ ಎಲ್ಲಾ ನಾಗರಿಕ (ಪೌರ) ಸೌಲಭ್ಯಗಳನ್ನು ಹೊಂದಿರುತ್ತವೆ. ಆದರೆ, ಕೆ.ಟಿ.ಸಿ.ಪಿ. ಕಾಯ್ದೆ, 1961ರ ನಿಯಂತ್ರಣ ಮತ್ತು ವ್ಯಾಪ್ತಿಯ ಹೊರಗಡೆ ಇರುತ್ತವೆ. ಆದ್ದರಿಂದ, ಇಂತಹ ‘ಬಿ’ ಖಾತಾ ಆಸ್ತಿಗಳನ್ನು ಸಹ ಕೆ.ಟಿ.ಸಿ.ಪಿ. ಕಾಯ್ದೆ, 1961ರ ನಿಯಂತ್ರಣ ಮತ್ತು ವ್ಯಾಪ್ತಿಗೆ ತರುವ ಅವಶ್ಯಕತೆ ಇರುತ್ತದೆ. ದಿನಾಂಕ: 30.09.2024ರ ನಂತರ ರಚಿಸಿರುವ ಅಥವಾ ನಿರ್ಮಿಸಲಾಗಿರುವ ಅನಧಿಕೃತ ಆಸ್ತಿಗಳಿಗೆ 22 ಖಾತಾ ನೀಡುವುದನ್ನು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024 (ಜಿ.ಬಿ.ಜಿ. ಕಾಯ್ದೆ-2024)ರ ಉಪ ಕಲಂ 3ರ ಕಲಂ 147 ನಿಷೇಧಿಸುತ್ತದೆ.ಈ ಮೇಲ್ಕಂಡ ವಿಷಯಗಳನ್ನು ಸಮಗ್ರವಾಗಿ ಪರಿಶೀಲಿಸಲು ಮತ್ತು ಶಿಫಾರಸ್ಸನ್ನು ನೀಡುವ ಸಲುವಾಗಿ ಬಿ.ಬಿ.ಎಂ.ಪಿ. ಮುಖ್ಯ ಆಯುಕ್ತರ ಆದೇಶ ಸಂಖ್ಯೆ. No:CC/BBMP/PR/9222/24-25,ದಿನಾಂಕ: 14.11.2024 ಅಧಿಕಾರಿಗಳನ್ನೊಳಗೊಂಡಂತೆ ಒಂದು ಸಮಿತಿಯನ್ನು ರಚಿಸಲಾಗಿತ್ತು.
ಈ ಸಮಿತಿಯು ಸುದೀರ್ಘವಾಗಿ ಪರಿಶೀಲಿಸಿ, ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ, 1976ಕ್ಕೆ ತಿದ್ದುಪಡಿ ಮಾಡಿ ಸೆಕ್ಷನ್ 108ಎ ಅನ್ನು ಸೇರ್ಪಡೆ ಮಾಡಿ ಜಾರಿಗೆ ತಂದ ನಂತರ, ಬಿ.ಬಿ.ಎಂ.ಪಿ.ಯಲ್ಲಿ ಅನಧಿಕೃತ ಆಸ್ತಿಗಳಿಗೆ ಬಿ-ಖಾತಾವನ್ನು ನೀಡುವ ಕ್ರಮವು 2009ನೇ ಸಾಲಿನಲ್ಲಿಯೇ ಜಾರಿಗೆ ಬಂದಿರುವುದಾಗಿ ತಿಳಿಸಲಾಗಿದೆ. ಆದ್ದರಿಂದ, ಅನಧಿಕೃತ ಆಸ್ತಿಗಳಿಗೆ ಬಿ-ಖಾತಾವನ್ನು ನೀಡುವ ಪರಿಕಲ್ಪನೆ ಅಥವಾ ಆಯ್ಕೆ ಇರಲಿಲ್ಲವಾದ್ದರಿಂದ, 2009ರ ಒಳಗೆ ನೀಡಿರುವ ಎಲ್ಲಾ ಖಾತಾಗಳು ಎ-ಖಾತಾ ಅಥವಾ ಕ್ರಮಬದ್ಧವಾದ ಖಾತಾಗಳಾಗಿರುತ್ತದೆ ಎಂದು ತಿಳಿಸಿಲಾಗಿದೆ.
ಮುಂದುವರೆದು, ದಿನಾಂಕ: 05.07.2021 ರಂದು ಕೆ.ಟಿ.ಸಿ.ಪಿ.. ಕಾಯ್ದೆಗೆ ತಿದ್ದುಪಡಿ ಮೂಲಕ ಸೆಕ್ಷನ್ 17ಕ್ಕೆ ಉಪ ಕಲಂ 2-ಇ ಅನ್ನು ಸೇರ್ಪಡೆ ಮಾಡಿ, ಇದರಲ್ಲಿ ಕೆ.ಟಿ.ಸಿ.ಪಿ. ಕಾಯ್ದೆ, 1961 ರಡಿ ಯೋಜನಾ ಪ್ರಾಧಿಕಾರದಿಂದ ಬಿಡುಗಡೆ ಮಾಡದಿರುವ ಯಾವುದೇ ನಿವೇಶನ ಕಟ್ಟಡಗಳಿಗೆ (building site) ಖಾತಾ ಅಥವಾ ಇ-ಖಾತಾ ನೀಡುವುದನ್ನು ನಿಷೇಧಿಸಲಾಗಿರುತ್ತದೆ.ಆದಾಗ್ಯೂ, ಈ ತಿದ್ದುಪಡಿಗಳನ್ನು ತರುವ ಮೊದಲೇ ಕೆ.ಟಿ.ಸಿ.ಪಿ. ಕಾಯ್ದೆ, 1961ರ ಪ್ರಕಾರ ಮಂಜೂರಾದ ಬಡಾವಣೆಗಳ ನಿವೇಶನಗಳಿಗೆ, ಎ-ಖಾತಾವನ್ನು ನೀಡುವುದರ ಜೊತೆಗೆ, ಬಿ.ಬಿ.ಎಂ.ಪಿ.ಯು “ಏಕ ನಿವೇಶನ (Single Plot)ಗಳಿಗೂ ಸಹ ಎ-ಖಾತಾವನ್ನು ನೀಡಲಾಗಿರುತ್ತದೆ.
ಈ ಕೆಳಕಂಡಂತಹ ರೀತಿಯಲ್ಲಿ ಆಸ್ತಿಗಳಿಗೆ ಎ-ಖಾತಾ & ಬಿ ಖಾತಾಗಳನ್ನು ನೀಡಲಾಗುತ್ತಿತ್ತು:
i) ಕರ್ನಾಟಕ ಭೂಕಂದಾಯ ಕಾಯ್ದೆ, 1964 (ಕೆಎಲ್ಆರ್ ಕಾಯ್ದೆ 1964) ರ ಸೆಕ್ಷನ್ 95 ರಡಿ ಕೃಷಿ ಜಮೀನನ್ನು, ಕೃಷಿಯೇತರ ಉದ್ದೇಶಗಳಿಗೆ ಬದಲಾವಣೆಗೊಂಡ ಯಾವುದೇ ವಿಸ್ತೀರ್ಣದ ಭೂಮಿಗೆ ಮತ್ತು ಅಭಿವೃದ್ಧಿ ಶುಲ್ಕವನ್ನು ಪಾವತಿಸಿದ ಜಾಗಕ್ಕೆ ಎ-ಖಾತಾ ನೀಡಲಾಗುತ್ತಿತ್ತು.
ii) 6000 ಚದರ ಅಡಿವರೆಗಿನ ಕಂದಾಯ ನಿವೇಶನಗಳಿಗೆ, ಅದರಲ್ಲಿ ಕಟ್ಟಡ ನಿರ್ಮಿಸಿದ್ದಲ್ಲಿ ಬಿ-ಖಾತಾವನ್ನು ನೀಡಲಾಗುತ್ತಿತ್ತು.
iii) ಅನಧಿಕೃತ ಕಟ್ಟಡ ನಿರ್ಮಿಸಲಾದ ಯಾವುದೇ ನಿವೇಶನಗಳು, ಅನಧಿಕೃತ ಬಡಾವಣೆಗಳ ನಿವೇಶನಗಳು, ಕರ್ನಾಟಕ ಭೂಕಂದಾಯ ಕಾಯ್ದೆ, ಕಲಂ 95ರಡಿ ಪರಿವರ್ತಿತಗೊಂಡ ಜಮೀನುಗಳಲ್ಲಿ ನಿರ್ಮಿಸಲಾದ ವಿಭಜಿತ ನಿವೇಶನಗಳಿಗೆ ಬಿ-ಖಾತಾವನ್ನು ನೀಡಲಾಗುತ್ತಿತ್ತು.
iv) ಕೃಷಿಯೇತರ ಉದ್ದೇಶಕ್ಕೆ ಸರ್ಕಾರವು ಮಂಜೂರು ಮಾಡಿದ ಜಾಗಗಳಿಗೆ ಎ-ಖಾತಾವನ್ನು ನೀಡಲಾಗುತ್ತಿತ್ತು.
v) ಕೆ.ಐ.ಎ.ಡಿ.ಬಿ., ಕೆ.ಹೆಚ್.ಬಿ., ಕೆ.ಎಸ್.ಎಸ್.ಐ.ಡಿ.ಸಿ ಅಭಿವೃದ್ಧಿಪಡಿಸಿ ಮೂಲಸೌಕರ್ಯ ಒದಗಿಸಿ, ໖.໖.໑໐.໖. ಹಸ್ತಾಂತರಿಸಲಾದ ಬಡಾವಣೆಗಳ ನಿವೇಶನಗಳಿಗೆ ಎ-ಖಾತಾವನ್ನು ನೀಡಲಾಗುತ್ತಿತ್ತು.
vi) ಕೆ.ಐ.ಎ.ಡಿ.ಬಿ., ಕೈಗಾರಿಕಾ ಬಡಾವಣೆಗಳಲ್ಲಿ ಏಕಘಟಕ ಪ್ಲಾಟ್ಗಳಿಗೆ ಎ-ಖಾತಾವನ್ನು ನೀಡಲಾಗುತ್ತಿತ್ತು.
ಬಿ.ಬಿ.ಎಂ.ಪಿ.ಯು ದಿನಾಂಕ: 30.09.2024 ರವರೆಗೆ ಮೇಲ್ಕಂಡ ವರ್ಗದ ಆಸ್ತಿಗಳಿಗೆ ಈ ಕೆಳಕಂಡ ಸುತ್ತೋಲೆಗಳನ್ನು ಆಧರಿಸಿ ಎ-ಖಾತಾವನ್ನು ನೀಡಿರುತ್ತದೆ:
ಬಿ.ಬಿ.ಎಂ.ಪಿ.ಯು ದಿನಾಂಕ: 03.10.2024ರ ಸುತ್ತೋಲೆಯಲ್ಲಿ ಕೆ.ಟಿ.ಸಿ.ಪಿ. ಕಾಯ್ದೆ, 1961ರ ಸೆಕ್ಷನ್ 17ರಡಿ ಅನುಮೋದನೆ ಪಡೆಯದೇ ಇರುವ ಸ್ವತ್ತುಗಳಿಗೆ ಎ-ಖಾತಾ ನೀಡುವುದನ್ನು ನಿಲ್ಲಿಸಿರುತ್ತದೆ. ಈ ಸುತ್ತೋಲೆಯು, ಮೇಲ್ಕಂಡ ಎಲ್ಲಾ ಸುತ್ತೋಲೆಗಳನ್ನು ರದ್ದುಪಡಿಸಿರುತ್ತದೆ. ಕೆ.ಟಿ.ಸಿ.ಪಿ. ಕಾಯ್ದೆ, 1961 ಅಡಿ 2020 ರ ತಿದ್ದುಪಡಿಗೆ ಮುನ್ನ, “ಏಕ ನಿವೇಶನ /ಪ್ಲಾಟ್” (Single Plot) ಗಳಿಗೆ ಅನುಮೋದನೆ ನೀಡುವ ಕುರಿತು ಈ ಕಾಯ್ದೆಯು ಕೇವಲ ಮೌನವಾಗಿದ್ದು, ನಿಷೇಧಿಸಿರುವುದಿಲ್ಲವಾದ್ದರಿಂದ 2020 ರಲ್ಲಿ ಕೆ.ಟಿ.ಸಿ.ಪಿ. ಕಾಯ್ದೆ, 1961 ಅನ್ನು ತಿದ್ದುಪಡಿ ಮಾಡುವ ಮುನ್ನ ನೀಡಲಾದ ಎ-ಖಾತಾಗಳನ್ನು ಈ ಶೂನ್ಯವನ್ನು ಸರಿಪಡಿಸಲು ತೆಗೆದುಕೊಂಡ ಕ್ರಮವೆಂದು ಅರ್ಥೈಸಿಕೊಳ್ಳಬಹುದು. ಆದಾಗ್ಯೂ, 2020 ರಲ್ಲಿ ತಿದ್ದುಪಡಿಯಾದ ನಂತರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು “ಏಕ ನಿವೇಶನ” (Single Plot) ಗಳಿಗೆ ಅನುಮೋದನೆ ನೀಡುವ ಬಗ್ಗೆ ಯಾವುದೇ ವ್ಯವಸ್ಥೆಯನ್ನು ಕಾರ್ಯಗತಗೊಳಿಸದೇ ಇದ್ದುದರಿಂದ, ಬಿ.ಬಿ.ಎಂ.ಪಿ.ಯು ಮೇಲ್ಕಂಡ ಸುತ್ತೋಲೆಗಳನ್ನು ಆಧರಿಸಿ ಎ-ಖಾತಾ ನೀಡುವುದನ್ನು ಮುಂದುವರೆಸಿರುತ್ತದೆ.ಅಂತಿಮವಾಗಿ, ಸದರಿ ವ್ಯವಸ್ಥೆಯನ್ನು ದಿನಾಂಕ: 03.10.2024 ನಿಲ್ಲಿಸಲಾಗಿರುತ್ತದೆ ಮತ್ತು ಈ ಸಮಸ್ಯೆಯನ್ನು ಬಗೆಹರಿಸಲು, ಒಂದು ಸಮಗ್ರ ನಿಲುವನ್ನು ತೆಗೆದುಕೊಳ್ಳಲು ಬಿ.ಬಿ.ಎಂ.ಪಿ.ಯು ದಿನಾಂಕ: 24.02.2025 ರಂದು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಪ್ರಸ್ತಾಪಿಸಿರುತ್ತದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಈ ಕೆಳಕಂಡ ಅಂಶಗಳಿಗೆ ಸರ್ಕಾರದ ಅನುಮೋದನೆ ನೀಡಿ ಆದೇಶಿಸಿದೆ.
(1) ಬಿ.ಬಿ.ಎಂ.ಪಿ.ಗೆ ಸಂಬಂಧಿಸಿದಂತೆ ಅನುಬಂಧ-1 ರಲ್ಲಿ ಒಳಗೊಂಡಿರುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
(2) ಎ ಮತ್ತು ಬಿ ಖಾತಾ ಎಂಬ ಪರಿಕಲ್ಪನೆ ಮೇರೆಗೆ ತಂದ ತಿದ್ದುಪಡಿ ಆಧಾರದ ಮೇಲೆ 2009 ರ ಅವಧಿಯೊಳಗೆ ನೀಡಲಾದ ಎ-ಖಾತಾ ಅಥವಾ ಸಾಮಾನ್ಯ ಖಾತಾಗಳು ಮತ್ತು ಈ ತಿದ್ದುಪಡಿಯ ಪೂರ್ವದಲ್ಲಿ, ಅನಧಿಕೃತ ಆಸ್ತಿಗಳು ಬಿ-ಖಾತಾವನ್ನು ಪಡೆಯುವ ಬಗ್ಗೆ ಯಾವುದೇ ಪರಿಕಲ್ಪನೆ ಇಲ್ಲದಿದ್ದರಿಂದ, ಸದರಿ ತಿದ್ದುಪಡಿಯ ಮುನ್ನ, ಆ ಸಮಯದಲ್ಲಿ ಜಾರಿಯಲ್ಲಿದ್ದ ಸುತ್ತೋಲೆಗಳ ಆಧಾರದ ಮೇಲೆ ನೀಡಲಾಗಿರುವ, ಎಲ್ಲಾ ಖಾತಾಗಳನ್ನು ಎಲ್ಲಾ ಕಾನೂನು ಉದ್ದೇಶಗಳಿಗೆ ಅಧಿಕೃತ ಮತ್ತು ಎ-ಖಾತಾ ಎಂದು ಪರಿಗಣಿಸಲು ಅನುಮೋದನೆ ನೀಡಿದೆ.







