ವಿಜಯಪುರ: ವಿಜಯಪುರದಲ್ಲಿ ಚಡ್ಡಿ ಗ್ಯಾಂಗ್ ಮತ್ತೆ ಪ್ರತ್ಯಕ್ಷವಾಗಿದೆ. ಇಲ್ಲಿನ ತಾಳಿಕೋಟೆ ಪಟ್ಟಣದಲ್ಲಿ ಚಡ್ಡಿ ಗ್ಯಾಂಗ್ ಕಾಣಿಸಿಕೊಂಡಿದ್ದು, ತಡರಾತ್ರಿ ಕಳ್ಳತನಕ್ಕೆ ಯತ್ನಿಸಿದೆ.
ಚಡ್ಡಿ ಗ್ಯಾಂಗ್ ನ ಆರು ಕಳ್ಳರು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೇ ತಾಲಿಕೋಟೆ ಪಟ್ಟಣದಲ್ಲಿ ಮನೆಯೊಂದಕ್ಕೆ ನುಗ್ಗಿ ಬೀಗ ಮುರಿದು ಕನ್ನ ಹಾಕಲು ಯತ್ನಿಸಿದೆ.
ನಿರಂತರವಾಗಿ ನಾಯಿಗಳು ಬೊಗಳಲಾರಂಭಿಸುತ್ತಿದ್ದಂತೆ ಚಡ್ದಿ ಗ್ಯಾಂಗ್ ಸ್ಥಳದಿಂದ ಕಾಲ್ಕಿತ್ತಿದೆ. ಪಟ್ಟಣದ ಗಣೇಶ ನಗರದಲ್ಲಿ ಹಲವೆಡೆ ದರೋಡೆಗೆ ಸಂಚು ರೂಪಿಸಿ ಅಂಗಿ, ಬನಿಯನ್, ಚಡ್ಡಿ, ಮುಖಕ್ಕೆ ಮಾಸ್ಕ್ ಧರಿಸಿ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ರಸ್ತೆಗಳಲ್ಲಿ ಓಡಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಡ್ಡಿ ಗ್ಯಾಂಗ್ ಬಗ್ಗೆ ಸಾರ್ವಜನಿಕರು ಎಚ್ಚರವಹಿಸುವಂತೆ ಹಾಗೂ ಅಪರಿಚಿತರು ಕಂಡು ಬಂದಲ್ಲಿ ತಾಳಿಕೋಟೆ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.