OMG : ಕೇರಳದಲ್ಲಿ ವಿಚಿತ್ರ ಘಟನೆ : ಹಲಸು ತಿಂದ ಬಸ್ ಚಾಲಕರು ‘ಡ್ರಿಂಕ್ & ಡ್ರೈವ್’ ಟೆಸ್ಟ್ ನಲ್ಲಿ ಫೇಲ್.!

ಕೇರಳದಲ್ಲಿ ವಿಚಿತ್ರ ಘಟನೆ ನಡೆದಿದ್ದು, ಹಲಸು ತಿಂದ ಬಸ್ ಚಾಲಕರು ಡ್ರಿಂಕ್ & ಡ್ರೈವ್ ಟೆಸ್ಟ್ ನಲ್ಲಿ ಫೇಲ್ ಆಗಿದ್ದಾರೆ. ಹೌದು, ಎಂದಿನಂತೆ ಬಸ್ ಡ್ಯೂಟಿಗೆ ಬಂದ ಚಾಲಕರಿಗೆ ಡ್ರಿಂಕ್ & ಡ್ರೈವ್ ಟೆಸ್ಟ್ ಮಾಡಲಾಗಿತ್ತು. ಆದರೆ ಡ್ರಿಂಕ್ & ಡ್ರೈವ್ ಟೆಸ್ಟ್ ನಲ್ಲಿ ಫೇಲ್ ಆಗಿದ್ದು, ನೀವು ಮದ್ಯ ಸೇವಿಸಿ ಬಂದಿದ್ದೀರಾ ಎಂದ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಚಾಲಕರು ನಾವು ಮದ್ಯ ಸೇವಿಸಿಲ್ಲ, ಆದರೆ ಹಲಸಿನ ಹಣ್ಣು ತಿಂದು ಬಂದಿದ್ದೇವೆ ಎಂದು ಹೇಳಿದ್ದಾರೆ.

ಇದರಿಂದ ಶಾಕ್ ಆದ ಚಾಲಕರು ಮತ್ತೆ ಅವರಿಗೆ ಹಲಸಿನ ಹಣ್ಣು ತಿನ್ನಿಸಿ ಮತ್ತೆ ಪರೀಕ್ಷೆ ಮಾಡಿದ್ದಾರೆ. ಆಗ ಕೂಡ ಮತ್ತೆ ಡ್ರಿಂಕ್ & ಡ್ರೈವ್ ಟೆಸ್ಟ್ ನಲ್ಲಿ ಫೇಲ್ ಆಗಿದ್ದಾರೆ.

ಕೇರಳದ ಪಟ್ಟಣಂತಿಟ್ಟ ಸಮೀಪದ ಪಂಡಾಲಂ ಡಿಪೋದಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ ಎದ್ದು ಕೆಲಸಕ್ಕೆ ಹಾಜರಾದ ಡ್ರೈವರ್ಗಳು ಎಂದಿನಂತೆ ಮದ್ಯ ಪರೀಕ್ಷೆ ಮಾಡಿಸಿದ್ದಾರೆ. ಪರೀಕ್ಷೆ ಮಾಡಿಸಿಕೊಂಡಾಗ ಯಂತ್ರವು ಮದ್ಯ ಸೇವಿಸಿದ್ದಾರೆಂದು ಘೋಷಿಸಿದೆ. ಆದರೆ ಅವರು ಮದ್ಯವನ್ನೇ ಸೇವಿಸಿರಲಿಲ್ಲ. ನಿಯಮದಂತೆ ಬಸ್ ಏರುವ ಮೊದಲು ಚಾಲಕರು ಡ್ರಿಂಕ್ & ಡ್ರೈವ್ ಟೆಸ್ಟ್ ಮಾಡಿಸಬೇಕು.

ಟೆಸ್ಟ್ ಮಾಡಿದಾಗ ಚಾಲಕರ ರಕ್ತದಲ್ಲಿ ಮದ್ಯದಮಟ್ಟ 10ಕ್ಕಿಂತ ಹೆಚ್ಚುತೋರಿಸುತ್ತಿತ್ತು. ಇದರಿಂದ ಶಾಕ್ ಆದ ಚಾಲಕರು, ‘ನಾವು, ಕೊಲ್ಲಂಜಿಲ್ಲೆಯಕೊಟ್ಟಾರಕರದಿಂದತಂದ ಹಲಸನ್ನು ತಿಂದದ್ದೇ ಇದಕ್ಕೆಕಾರಣ’ ಎಂದು ಹೇಳಿದ್ದಾರೆ. ಇದರಿಂದ ಶಾಕ್ ಆದ ಚಾಲಕರು ಮತ್ತೆ ಅವರಿಗೆ ಹಲಸಿನ ಹಣ್ಣು ತಿನ್ನಿಸಿ ಮತ್ತೆ ಪರೀಕ್ಷೆ ಮಾಡಿದ್ದಾರೆ. ಆಗ ಕೂಡ ಮತ್ತೆ ಡ್ರಿಂಕ್ & ಡ್ರೈವ್ ಟೆಸ್ಟ್ ನಲ್ಲಿ ಫೇಲ್ ಆಗಿದ್ದಾರೆ. ಹಲಸು ಅತಿಯಾಗಿ ಹಣ್ಣಾಗಿದ್ದರಿಂದ ಈ ರೀತಿ  ಆಗಿದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read