ಹುಬ್ಬಳ್ಳಿ : ಮುಖ್ಯಮಂತ್ರಿಗಳ ದೃಢನಿರ್ಧಾರ ಹಾಗೂ ಸಕಾಲಿಕ ಕ್ರಮಗಳಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ನಿರಂತರ ಅನುದಾನ ನೀಡಲು ಮುಖ್ಯಮಂತ್ರಿಗಳು ಸಮ್ಮತಿಸಿ, ಕ್ರಮಕೈಗೊಂಡಿದ್ದಾರೆ ಎಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರು ಹೇಳಿದರು.
ಹುಬ್ಬಳ್ಳಿ ಸಕ್ರ್ಯೂಟ್ ಹೌಸ್‍ದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ವಿವರಿಸಿದರು.
ರಾಜ್ಯದ ಪ್ರತಿ ಶಾಸಕರಿಗೆ ಬೇಡಿಕೆ ಅನುಸಾರವಾಗಿ ಅನುದಾನ ಬಿಡುಗಡೆ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ಬರುವ ಜುಲೈ 30, 31 ಮತ್ತು ಆಗಸ್ಟ್ 3 ರಂದು ಶಾಸಕರೊಂದಿಗೆ ಮುಖ್ಯಮಂತ್ರಿಗಳ ನೇರ ಭೇಟಿ ಮಾಡಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನಲ್ಲಿ 4.09 ಲಕ್ಷ ರೂ. ಬಜೆಟ್ ಮಂಡಿಸಿದೆ. ಅದರಲ್ಲೂ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗಿಸಲು 83 ಸಾವಿರ ಕೋಟಿ ರೂ. ಬಂಡವಾಳ ವೆಚ್ಚವಿದೆ. ರಾಜ್ಯದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
2024-25ನೇ ಸಾಲಿನಲ್ಲಿ ತೆರಿಗೆ ಸಂಗ್ರಹಣಾ ಇಲಾಖೆಗಳಿಗೆ ನೀಡಿದ್ದ ಗುರಿ ಮತ್ತು ಸಂಗ್ರಹಿಸಲಾದ ತೆರಿಗೆ ವಿವರ (ಇಲಾಖಾವಾರು): 2024- 25 ಸಾಲಿನ ವಾಣಿಜ್ಯ ತೆರಿಗೆ 1,10,000 ಆಯವ್ಯಯ 1,02,431 ಕೋಟಿ ಶೇ,93.1, ಅಬಕಾರಿ ಇಲಾಖೆ 38,525 ಆಯವ್ಯಯ 35,784, ಸಂಗ್ರಹಣೆ 92.9, ಮೋಟಾರು ವಾಹನ ತೆರಿಗೆ 13,000 ಆಯವ್ಯಯ 12,516 ಸಂಗ್ರಹಣೆ ಶೇ 96.3, ಮುದ್ರಾಂಕ ಮತ್ತು ನೋಂದಣಿ ಶುಲ್ಕ 26,000 ಆಯವ್ಯಯ 22,353 ಸಂಗ್ರಹಣೆ ಶೇ, 86 ರಷ್ಟು ಹಾಗಿದೆ ಒಟ್ಟು ಆಯವ್ಯಯ 1,87,525 ಸಂಗ್ರಹಣೆ 1,73,083 ಶೇ. 92.3 ಸಾವಿರ ಕೋಟಿ ಬಿಡುಗಡೆ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಅವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ವಿಧಾನಸಭಾ ಸದಸ್ಯರಿಗೆ ವಿಶೇಷ ಅನುದಾನ ಬಿಡುಗಡೆಗೊಳ್ಳಲಿದೆ. ರಾಜ್ಯದಲ್ಲಿ ಒಟ್ಟು 224 ವಿಧಾನಸಭಾ ಸದಸ್ಯರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 28 ಸದಸ್ಯರನ್ನು ಹೊರತುಪಡಿಸಿ ಉಳಿದ 196 ಸದಸ್ಯರಿಗೆ ವಿಶೇಷ ಅನುದಾನ ದೊರೆಯಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 28 ಸದಸ್ಯರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದಲೇ ಅನುದಾನ ದೊರೆಯಲಿದೆ.
ಪತ್ರಿಕಾಗೋಸೃಷ್ಟಿಯಲ್ಲಿ ಮಾಜಿ ಸಂಸದ ಐ.ಜಿ. ಸನದಿ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ, ಮುಖಂಡರಾದ ಅನಿಲಕುಮಾರ ಪಾಟೀಲ, ಸದಾನಂದ ಡಂಗನವರ, ಚಂದ್ರಶೇಖರ ಜುಟ್ಟಲ ಸೇರಿದಂತೆ ಇತರರು ಇದ್ದರು.