ಮಹಾರಾಷ್ಟ್ರದ ಮುಂಬೈನ ಗಿರ್ಗಾಂವ್ನಲ್ಲಿರುವ ಇಸ್ಕಾನ್ ದೇವಾಲಯಕ್ಕೆ ಸೋಮವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಆತಂಕ ಉಂಟಾಗಿದೆ.
ತಮಿಳುನಾಡು ಸರ್ಕಾರವು ವಿವಿಧ ಸಮಿತಿಗಳ ಶಿಫಾರಸುಗಳನ್ನು ಜಾರಿಗೆ ತರದಿದ್ದರೆ 16 ಗಂಟೆಗಳ ಒಳಗೆ RDX ತುಂಬಿದ ಐದು IED ಬಾಂಬ್ಗಳು ಸ್ಫೋಟಗೊಳ್ಳುತ್ತವೆ ಎಂದು ಅಪರಿಚಿತ ಐಡಿಯಿಂದ ಕಳುಹಿಸಲಾದ ಬೆದರಿಕೆ ಇಮೇಲ್ನಲ್ಲಿ ಹೇಳಲಾಗಿದೆ.
ಪೊಲೀಸ್ ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿದ್ದು, ದೇವಾಲಯದ ಆವರಣದಲ್ಲಿ ಏನೂ ಪತ್ತೆಯಾಗಿಲ್ಲ ಎಂದು ಹಲವಾರು ವರದಿಗಳು ಸೂಚಿಸಿವೆ. ಬಾಂಬ್ ಬೆದರಿಕೆಗೆ ಸಂಬಂಧಿಸಿದಂತೆ ಪ್ರಕರಣವೂ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ.
You Might Also Like
TAGGED:ಇಸ್ಕಾನ್ ದೇವಾಲಯ