GOOD NEWS : ‘ನೇಕಾರರ ಸಮ್ಮಾನ್ ಯೋಜನೆ’ಯಡಿ  ರೂ.5,000 ಆರ್ಥಿಕ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಕೈಮಗ್ಗ ಮತ್ತು ಜವಳಿ ಇಲಾಖೆಯು ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರುಗಳಿಗೆ ಹಾಗೂ ನೇಕಾರಿಕೆಗೆ ಸಂಬಂಧಿಸಿದ ಇತರೆ ಚಟುವಟಿಕೆಗಳಲ್ಲಿ ತೊಡಗಿರುವ ನೇಕಾರರಿಗೆ ಪ್ರಸಕ್ತ ಸಾಲಿನ ನೇಕಾರರ ಸಮ್ಮಾನ್ ಯೋಜನೆಯಡಿ ವಾರ್ಷಿಕವಾಗಿ ರೂ.5,000/-ಗಳ ಆರ್ಥಿಕ ನೆರವು ನೀಡಲು ಅವಕಾಶ ಕಲ್ಪಿಸಲಾಗಿದ್ದು, ಈ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ.

2024-25ನೇ ಸಾಲಿನಲ್ಲಿ ನೇಕಾರರ ಸಮ್ಮಾನ್ ಯೋಜನೆಯಡಿ ಸೌಲಭ್ಯ ಪಡೆದಿರುವ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರ ಪಟ್ಟಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಮೃತರಾಗಿರುವ, ನೇಕಾರಿಕೆ ವೃತ್ತಿ ಬಿಟ್ಟಿರುವ ಮತ್ತು ಬೇರೆ ಕಡೆ ಸ್ಥಳಾಂತರಗೊಂಡಿರುವ ನೇಕಾರರನ್ನು ಹೊರತುಪಡಿಸಿ ನೇಯ್ಗೆ ಚಟುವಟಿಕೆಯಲ್ಲಿ ತೊಡಗಿರುವ ಅರ್ಹ ನೇಕಾರರ ವಿವರಗಳನ್ನು ಸ್ಥಳೀಯ ಕೈಮಗ್ಗ ಅಭಿವೃದ್ಧಿ ನಿಗಮ, ನೇಕಾರ ಸಹಕಾರ ಸಂಘಗಳ ಮೂಲಕ ಅಥವಾ ನೇರವಾಗಿ ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಬಿ.ಡಿ.ರಸ್ತೆ, ಯೂನಿಯನ್ ಪಾರ್ಕ್ ಹತ್ತಿರ, ಮಸೀದಿ ಪಕ್ಕ, ಚಿತ್ರದುರ್ಗ ಕಚೇರಿಗೆ ಆಗಸ್ಟ್ 16ರೊಳಗಾಗಿ ವಿವರಗಳನ್ನು ಸಲ್ಲಿಸುವುದು.

ಕಳೆದ ಸಾಲಿನಲ್ಲಿ ನೊಂದಣೆಯಾಗದೇ ಇರುವ ನೇಕಾರಿಕೆ ಚಟುವಟಿಕೆಯಲ್ಲಿ ತೊಡಗಿರುವ ಅರ್ಹ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನೇಕಾರರಿಗೆ ಹೊಸದಾಗಿ ಅರ್ಜಿ ನಮೂನೆಯೊಂದಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ನೇಕಾರರ ಗುರುತಿನ ಚೀಟಿ, ನೇಕಾರಿಕೆ ವೃತ್ತಿಯಲ್ಲಿ ತೊಡಗಿರುವ ಪೋಟೋ ಪ್ರತಿ ಹಾಗೂ ನೇಕಾರಿಕೆ ವೃತ್ತಿಯಲ್ಲಿ ಪಡೆಯುತ್ತಿರುವ ವಿವರಗಳೊಂದಿಗೆ ಆಗಸ್ಟ್ 30ರೊಳಗಾಗಿ ಹೊಸದಾಗಿ ಅರ್ಜಿ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಬಿ.ಡಿ.ರಸ್ತೆ, ಯೂನಿಯನ್ ಪಾರ್ಕ್ ಹತ್ತಿರ, ಮಸೀದಿ ಪಕ್ಕ, ಚಿತ್ರದುರ್ಗಯ ಕಚೇರಿ ದೂರವಾಣಿ ಸಂಖ್ಯೆ 08194-221426 ಗೆ ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read