ಬೀದರ್: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ಕೈಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಪ್ರಭು ಚೌವ್ಹಾಣ್ ಪುತ್ರನ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಬೀದರ್ ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಭು ಚೌವ್ಹಾಣ್ ಪುತ್ರ ಪ್ರತೀಕ್ ಚೌವ್ಹಾಣ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಂತ್ರಸ್ತೆ ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಭು ಚೌವ್ಹಾಣ್ ಪುತ್ರ ಪ್ರತೀಕ್ ಚೌವ್ಹಾಣ್ ವಿರುದ್ಧ ಸಂತ್ರಸ್ತ ಯುವತಿ ಈ ಹಿಂದೆಯೇ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಇಂದು ಬೆಳಿಗ್ಗೆ ಬೀದರ್ ಎಸ್ ಪಿ ಪ್ರದೀಪ್ ಗುಂಟಿ ಅವರಿಗೂ ದೂರು ನೀಡಿದ್ದರು. ಇದೀಗ ಪ್ರತೀಕ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಪ್ರತೀಕ್ ಚೌವ್ಹಾಣ್ ವಿರುದ್ಧ ಅರೇಂಜ್ಡ್ ಸೆಕ್ಸ್ ದೋಖಾ ಆರೋಪ ಕೇಳಿಬಂದಿದೆ. ಮಹಾರಾಷ್ಟ್ರ ಮೂಲದ ಯುವತಿಯೊಂದಿಗೆ ಕುಟುಂಬದವರೆ ಸೇರಿ ಮದುವೆ ನಿಶ್ಚಿತಾರ್ಥ ಮಾಡಿದ್ದು, 2023 ಡಿಸೆಂಬರ್ 25ರಂದು ನಿಶ್ಚಿತಾರ್ಥವಾಗಿತ್ತು. ನಿಶ್ಚಿತಾರ್ಥದ ಬಳಿಕ ಪ್ರತೀಕ್ ಚೌವ್ಹಾಣ್, ಯುವತಿಯನ್ನು ಮಹಾರಾಷ್ಟ್ರದ ಹಲವೆಡೆ ಸುತ್ತಾಡಲು ಕರೆದೊಯ್ದಿದ್ದಾರೆ. ಈ ವೇಳೆ ಯುವತಿ ಮೇಲೆ ಪ್ರತೀಕ್ ಅತ್ಯಾಚಾರವೆಸಗಿದ್ದಾನೆ. ನಿಶ್ಚಿತಾರ್ಥವಾಗಿದೆ, ಹೇಗಂದರೂ ಇಷ್ಟರಲ್ಲೇ ಮದುವೆಯಾಗುತ್ತೇವೆ ಎಂದು ಯುವತಿಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕವೇರ್ಪಡಿಸಿದ್ದಾರೆ. ಈಗ ಮದುವೆಯಾಗಲು ನಿರಾಕರಿಸುತ್ತಿದ್ದು, ಮಾತುಕತೆಗೆಂದು ಮನೆಗೆ ಹೋದ ಯುವತಿ ಕುಟುಂಬದ ಮೇಲೆ ಪ್ರತೀಕ್ ಚೌವ್ಹಾಣ್ ಹಾಗೂ ಕುಟುಂಬದವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪ್ರತೀಕ್ ಚೌವ್ಹಾಣ್ ನಿಂದ ಮೋಸ ಹೋದ ಸಂತ್ರಸ್ತ ಯುವತಿ ಬೀದರ್ ಎಸ್ ಪಿಗೆ ದೂರು ನೀಡಿದ್ದು, ಇದೀಗ ಪ್ರಕರಣ ದಾಖಲಾಗಿದೆ.