ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈವಿಧ್ಯಮಯ ವಿಡಿಯೋಗಳು ವೈರಲ್ ಆಗುತ್ತಿವೆ. ಅವುಗಳಲ್ಲಿ ಕೆಲವು ಹಾಸ್ಯಮಯವಾಗಿದ್ದರೆ, ಇನ್ನು ಕೆಲವು ಚಿಂತನೆಗೆ ಹಚ್ಚುವಂತಿರುತ್ತವೆ. ಇಂತಹ ವಿಡಿಯೋಗಳ ಸಾಲಿಗೆ ಇದೀಗ ಒಂದು ಹೊಸ ವಿಡಿಯೋ ಸೇರಿದ್ದು, ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.
ಪ್ರಸ್ತುತ ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಒಬ್ಬ ಪುಟ್ಟ ಹುಡುಗ ತನ್ನ ಮನೆಯಲ್ಲಿ ಕುರ್ಚಿಯ ಮೇಲೆ ತಲೆಕೆಳಗಾಗಿ ಮಲಗಿಕೊಂಡು, ತನ್ನ ಕಾಲುಗಳೆರಡನ್ನೂ ಕುರ್ಚಿಯ ಮೇಲೆ ಊರಿ, ಹೋಂವರ್ಕ್ ಬರೆಯುವುದನ್ನು ಕಾಣಬಹುದು. ಮನೆಯಲ್ಲಿ ಯಾರೋ ಇದನ್ನು ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾರೆ. ವಿಡಿಯೋದಲ್ಲಿ ಮಗು ತಲೆಕೆಳಗಾಗಿದ್ದರೂ, ಯಾವುದೇ ಅಳುಕಿಲ್ಲದೆ ಏಕಾಗ್ರತೆಯಿಂದ ಹೋಂವರ್ಕ್ ಮಾಡುತ್ತಿರುವುದು ಕಾಣುತ್ತದೆ.
ಈ ವಿಡಿಯೋಗೆ “ಹೋಂವರ್ಕ್ ಮುಗಿಸಲೇಬೇಕು” ಎಂಬ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದ್ದು, ಇದನ್ನು ನೋಡಿದ ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಗುವಿನ ಈ ವಿಶಿಷ್ಟ ಮತ್ತು ಹಾಸ್ಯಮಯ ಕಲಿಕೆಯ ಭಂಗಿಯು ಹಲವರನ್ನು ಅಚ್ಚರಿಗೊಳಿಸಿದ್ದು, ಮುಗುಳ್ನಗೆ ಬೀರುವಂತೆ ಮಾಡಿದೆ.
உங்களுக்கு ஹோம் வொர்க் தான எழுதனும் எப்படி எழுதுனா என்ன 😒 pic.twitter.com/jvrh50JEvI
— KodaiA2_Holidays (@KodaiA2_Holiday) July 17, 2025