ಬೆಂಗಳೂರು: ಬ್ಯಾಟರಿ ಚಾಲಿತ(ಎಲೆಕ್ಟ್ರಿಕ್ ವೆಹಿಕಲ್ಸ್) ಸಾರಿಗೆ ವಾಹನಗಳಿಗೆ ಪರ್ಮಿಟ್ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.
ಸಾರಿಗೆ ಇಲಾಖೆಯಿಂದ ಪರ್ಮಿಟ್ ಪಡೆಯದೆ ಇದ್ದರೆ ದಂಡ ಕಟ್ಟಬೇಕಾಗುತ್ತದೆ. ಪ್ರಯಾಣಿಕರು ಮತ್ತು ಸರಕು ಸಾಗಣೆ ಉದ್ದೇಶಕ್ಕೆ ಬಳಕೆಯಾಗುವ ಬ್ಯಾಟರಿ ಚಾಲಿತ ಬಸ್, ಆಟೋರಿಕ್ಷಾ, ಕಾರು ಸೇರಿದಂತೆ ಇತರೆ ವಾಹನಗಳಿಗೆ ಪರ್ಮಿಟ್ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಪರ್ಮಿಟ್ ಇಲ್ಲದಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಕೆಎಸ್ಆರ್ಟಿಸಿ, ಬಿಎಂಟಿಸಿಯಲ್ಲಿರುವ ಇವಿ ಬಸ್ ಗಳೊಂದಿಗೆ ಖಾಸಗಿ ಸಾರಿಗೆ ಬಸ್ ಗಳಿಗೂ ಪರ್ಮಿಟ್ ಪಡೆಯುವುದು ಅನಿವಾರ್ಯವಾಗಿದೆ. ಇವಿ ಬಳಕೆಗೆ ಪ್ರೋತ್ಸಾಹ ನೀಡಲು ವಾಣಿಜ್ಯ ಉದ್ದೇಶಕ್ಕೆ ಬಳಸುವ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳಿಗೆ ಪರ್ಮಿಟ್ ನಿಂದ ವಿನಾಯಿತಿ ನೀಡಿತ್ತು. ಈ ವಿನಾಯಿತಿಯನ್ನು ಹಿಂಪಡೆಯಲಾಗಿದೆ. ಪರ್ಮಿಟ್ ಪಡೆಯಲು ವಿಧಿಸುವ ಶುಲ್ಕದಿಂದ ಹಸಿರು ವಾಹನಗಳಿಗೆ ವಿನಾಯಿತಿ ನೀಡಲಾಗಿದ್ದು, ಉಚಿತವಾಗಿ ಪರ್ಮಿಟ್ ನೀಡಲಾಗುವುದು ಎಂದು ಹೇಳಲಾಗಿದೆ.