ಕೊಪ್ಪಳ: ಮಾಜಿ ಶಾಸಕ ಬಸವರಾಜ್ ದಡೇಸೂಗುರು ಕಾರಿನ ಮೇಲೆ ಕಿಡುಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿ ನಡೆದಿದೆ.
ಇಲ್ಲಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಮಾಜಿ ಶಾಸಕರ ಕಾರು ಹೋಗುತ್ತಿದ್ದಾಗ ಮರೆಯಲ್ಲಿ ನಿಂತಿದ್ದ ಕಿಡಿಗೇದಿಗಳು ಕಾರ್ನ ಮೇಲೆ ಕಲ್ಲೆಸೆದಿದ್ದಾರೆ. ನನಗೆ ಜೀವ ಬೆದರಿಕೆ ಇದೆ ಎಂದು ಡಡೇಸೂಗೂರು ತಿಳಿಸಿದ್ದಾರೆ.
ನನಗೆ ಜೀವಬೆದರಿಕೆ ಇದೆ. ಗನ್ ಮ್ಯಾನ್ ಕೊಡಿ ಎಂದು ಮನವಿ ಮಾಡಿದರೂ ಕೊಟ್ಟಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಪ್ರಭಾವಕ್ಕೆ ಮಣಿದು ಎಸ್ ಪಿ ನನಗೆ ಗನ್ ಮ್ಯಾನ್ ಕೊಡಲು ನಿರಾಕರಿಸಿದ್ದರೆ. ನನಗೆ ಹಲವು ದಿನಗಳಿಂದ ಬೆದರಿಕೆ ಇದೆ ಎಂದಿದ್ದಾರೆ.