ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಶಿಸು ಆರೈಕೆ ಸಿಬ್ಬಂದಿಗಳ ಬೇಜವಾಬ್ದಾರಿಗೆ ಮಗುವಿನ ದೇಹವೇ ಸುಟ್ಟು ಹೋಗಿರುವ ಘಟನೆ ನಡೆದಿದೆ. ಜಿಲ್ಲೆಯ ಸರ್ಕಾರಿ ವಿಶೇಷ ದತ್ತು ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ.
ಒಂದು ವರ್ಷದ ಹೆಣ್ಣು ಮಗುವಿನ ಮೇಲೆ ಶಿಶು ಆರೈಕೆ ಸಿಬ್ಬಂದಿ ಕುದಿಯುವ ನೀರು ಸಿರಿದಿದ್ದಾರೆ. ಮಗುವಿನ ಸೊಂಟದ ಕೆಳಭಾಗ ಸುಟ್ಟು ಹೋಗಿದ್ದು, ಮಗು ಸ್ಥಿತಿ ಗಂಭೀರವಾಗಿದೆ. ಮಲ ವಿಸರ್ಜನೆ ಮಾಡಿದ್ದ ಮಗುವನ್ನು ಸ್ವಚ್ಛ ಮಾಡುವ ವೇಳೆ ಸಿಬ್ಬಂದಿ ಕುದಿಯುವ ನಿರನ್ನು ಮಗುವಿನ ಮೇಲೆ ಸುರಿದಿದ್ದಿದ್ದಾರೆ. ಕಂದಮ್ಮ ಸುಟ್ಟ ಗಾಯಗಳಿಂದ ನರಳುತ್ತಿದೆ.
ಚಿಕ್ಕಮಗಳೂರು ನಗರದ ಗಾಂಧಿನಗರದಲ್ಲಿರುವ ಸರ್ಕಾರಿ ವಿಶೇಷ ದತ್ತು ಸಂಸ್ಥೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಡಿಯಲ್ಲಿ ಬರುತ್ತಿದ್ದು, ಅನಾಥ ಮಕ್ಕಳ ಆರೈಕೆ ಜವಾಬ್ದಾರಿ ಹೊಂದಿದೆ. ಈ ಸಂಸ್ಥೆಯಲ್ಲಿ ಸಿಬ್ಬಂದಿಗಳ ಎಡವಟ್ಟಿಗೆ ಮಗು ಸ್ಥಿತಿ ಗಂಭೀರವಾಗಿದೆ. ಹೆಣ್ಣು ಮಗುವನ್ನು ದತ್ತು ಪಡೆಯುವ ಸಿದ್ಧತೆ ನಡೆದಿತ್ತು. ಅಷ್ಟರಲ್ಲಿ ಸಿಬ್ಬಂದಿ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ. ಗಾಯಾಳು ಮಗುವನ್ನು ಚಿಕ್ಕಮಗಳೂರು ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀದಲಗುತ್ತಿದೆ.