ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸೊಸೆಯೊಬ್ಬಳು ತನ್ನ ತಂದೆಯೊಂದಿಗೆ ಸೇರಿ ವೃದ್ಧ ಮಾವನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾಳೆ. ಮಾವನನ್ನು ಹಾಸಿಗೆಯ ಮೇಲೆ ಮಲಗಿಸಿ, ಕೈ ಹಿಡಿದು ಹೊಡೆಯುತ್ತಿದ್ದ ದೃಶ್ಯ ವೈರಲ್ ಆಗಿದೆ. ಘಟನೆಯ ಸಮಯದಲ್ಲಿ, ಸ್ಥಳದಲ್ಲಿ ನೆರೆದಿದ್ದ ಜನರು ವೃದ್ಧರನ್ನು ರಕ್ಷಿಸಲು ಮುಂದಾಗದೆ, ವಿಡಿಯೋ ಮಾಡುತ್ತಾ ನಿಂತಿದ್ದಾರೆ ಎನ್ನಲಾಗಿದೆ.
ಘಟನೆ ವಿವರ: ಈ ಘಟನೆ ಬಕೆವಾರ್ ಪ್ರದೇಶದ ರಹತ್‌ಪುರ ಗ್ರಾಮದಲ್ಲಿ ನಡೆದಿದೆ. ಜೈ ಕಿಶನ್ ಎಂಬುವರು ಹೇಳುವಂತೆ, ಅವರ ಮಗ ಧರ್ಮೇಂದ್ರನಿಗೆ ಒಂದು ವರ್ಷದ ಹಿಂದೆ ಮದುವೆಯಾಗಿತ್ತು ಮತ್ತು ಇತ್ತೀಚೆಗೆ ಸೊಸೆಗೆ ಮಗು ಜನಿಸಿತ್ತು. ಆದರೆ, ಒಂದು ತಿಂಗಳ ಹಿಂದೆ, ಸೊಸೆಯ ತಂದೆ ರಣ್ವೀರ್ ಬಲವಂತವಾಗಿ ಮಗಳನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದರು.
ಮಾಹಿತಿಯ ಪ್ರಕಾರ, ಬುಧವಾರ ಮಧ್ಯಾಹ್ನ, ಸೊಸೆ ತನ್ನ ತಂದೆಯೊಂದಿಗೆ ಮನೆಗೆ ಬಂದು ಐದು ಸಾವಿರ ರೂಪಾಯಿ ಖರ್ಚಿಗೆ ಹಣಕ್ಕಾಗಿ ಬೈಯಲು ಮತ್ತು ಬೇಡಿಕೆ ಇಡಲು ಪ್ರಾರಂಭಿಸಿದ್ದಾಳೆ. ಮಾವ ಜೈ ಕಿಶನ್ ಹಣ ಕೊಡಲು ನಿರಾಕರಿಸಿದಾಗ, ಸೊಸೆ ಮತ್ತು ಅವಳ ತಂದೆ ಸೇರಿ ವೃದ್ಧರನ್ನು ಹಾಸಿಗೆ ಮೇಲೆ ಎಸೆದು ಥಳಿಸಿದ್ದಾರೆ. ಸೊಸೆ ತನ್ನ ಮಾವನಿಗೆ ಹಲವಾರು ಬಾರಿ ಕಪಾಳಮೋಕ್ಷ ಮಾಡಿದ್ದಾಳೆ. ರಣ್ವೀರ್ ಮನೆಯನ್ನು ಬೀಗ ಹಾಕುವ ಬೆದರಿಕೆಯನ್ನೂ ಹಾಕಿದ್ದಾನೆ. ವೃದ್ಧರ ಕಿರುಚಾಟ ಕೇಳಿ ಪಕ್ಕದ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದ್ದು, ನಂತರ ತಂದೆ ಮತ್ತು ಮಗಳು ಅಲ್ಲಿಂದ ಹೊರಟು ಹೋಗಿದ್ದಾರೆ.
ಆಭರಣ ಮತ್ತು ಬೆದರಿಕೆ: ಅಂತಿಮವಾಗಿ, ಸೊಸೆ ಮದುವೆಯಲ್ಲಿ ನೀಡಿದ ಆಭರಣ ಮತ್ತು ಹಣವನ್ನು ತೆಗೆದುಕೊಂಡು ಕೊಲೆ ಬೆದರಿಕೆ ಹಾಕಿ ಹೊರಟು ಹೋಗಿದ್ದಾಳೆ. ಇನ್ನೊಂದೆಡೆ, ಯಾರೋ ಈ ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಕ್ಷಣಾರ್ಧದಲ್ಲಿ ವೈರಲ್ ಆಗಿದೆ.
ಪೊಲೀಸ್ ಕ್ರಮ: ಈ ಪ್ರಕರಣದ ಬಗ್ಗೆ ಮಾತನಾಡಿರುವ ಇನ್ಸ್‌ಪೆಕ್ಟರ್-ಪ್ರಭಾರಿ ಭೂಪೇಂದ್ರ ಸಿಂಗ್ ರಾಠಿ, ಜಗಳದ ವಿಡಿಯೋ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. ಜೈ ಕಿಶನ್ ಅವರ ದೂರಿನ ಮೇರೆಗೆ ಸೊಸೆ ಸುಪತ್ರಾ ಮತ್ತು ಆಕೆಯ ತಂದೆ ರಣ್ವೀರ್ ವಿರುದ್ಧ ವರದಿಯನ್ನು ದಾಖಲಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
इटावा में एक बहू ने अपने ससुर को पीट दिया। वहीं, पास में खड़े उसके पिता और बढ़ावा देते रहे। एक साल पहले ही महिला की शादी हुई थी। #etawah pic.twitter.com/pcHf0NpH4K
— Pawan Kumar Sharma (@pawanks1997) July 18, 2025