BIG NEWS : ರಾಜ್ಯದ ಕಟ್ಟಡ ಕಾರ್ಮಿಕರ ಮರಣ ಪರಿಹಾರ 8 ಲಕ್ಷಕ್ಕೆ, ಅಂತ್ಯಕ್ರಿಯೆ ವೆಚ್ಚ 1.50 ಲಕ್ಷಕ್ಕೆ ಏರಿಕೆ.!

ಬೆಂಗಳೂರು : ರಾಜ್ಯದ ಕಟ್ಟಡ ಕಾರ್ಮಿಕರ ಮರಣ ಪರಿಹಾರ 8 ಲಕ್ಷಕ್ಕೆ ಹಾಗೂ ಅಂತ್ಯಕ್ರಿಯೆ ವೆಚ್ಚ 1.50 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

ಹೌದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಫಲಾನುಭವಿಗಳಿಗೆ ನೀಡುವ ಅಪಘಾತ ಮರಣ ಪರಿಹಾರ ಮತ್ತು ಅಂತ್ಯಕ್ರಿಯೆ ವೆಚ್ಚ ಸಹಾಯಧನವನ್ನು ಸರ್ಕಾರ ಹೆಚ್ಚಿಸಿದೆ.

ಈ ಬಗ್ಗೆ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಭಾರತಿ ಮಾಹಿತಿ ನೀಡಿದ್ದು, ನೋಂದಾಯಿತ ಕಾರ್ಮಿಕರು ಕೆಲಸದ ಸ್ಥಳದಲ್ಲಿ ಅಪಘಾತದಿಂದ ಮರಣ ಹೊಂದಿದಲ್ಲಿ ನೀಡಲಾಗುತ್ತಿದ್ದ ₹5 ಲಕ್ಷ ಪರಿಹಾರ ವನ್ನು ₹8 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮರಣ ಹೊಂದಿದಾಗ ನೀಡಲಾಗುತ್ತಿದ್ದ ಅಂತ್ಯಕ್ರಿಯೆ ವೆಚ್ಚ ಮತ್ತು ಅನುಗ್ರಹ ರಾಶಿ ಸಹಾಯಧನ ಮೊತ್ತವನ್ನು ₹75 ಸಾವಿರಗಳಿಂದ 1.50 ಲಕ್ಷಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read