ಟಾಲಿವುಡ್ ನ ಖ್ಯಾತ ಹಾಸ್ಯನಟ ಫಿಶ್ ವೆಂಕಟ್ ನಿಧನರಾಗಿದ್ದಾರೆ. ಜನಪ್ರಿಯ ನಟ ಫಿಶ್ ವೆಂಕಟ್, ಅವರ ನಿಜವಾದ ಹೆಸರು ವೆಂಕಟ್ ರಾಜ್, ಜುಲೈ 18, 2025 ರಂದು ನಿಧನರಾದರು. ಕೆಲವು ಸಮಯದಿಂದ ಮೂತ್ರಪಿಂಡ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ ಅವರು ಶುಕ್ರವಾರ ರಾತ್ರಿ ಹೈದರಾಬಾದ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಪರಿಪೂರ್ಣ ಹಾಸ್ಯ ಸಮಯಪ್ರಜ್ಞೆಗೆ ಹೆಸರುವಾಸಿಯಾಗಿದ್ದ ನಟ, ಹಲವು ತಿಂಗಳುಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.. ಅವರು ಡಯಾಲಿಸಿಸ್ಗೆ ಒಳಗಾಗಿದ್ದರು ಹಾಗೂ ಇತ್ತೀಚೆಗೆ ಅವರು ವೆಂಟಿಲೇಟರ್ ಸಪೋರ್ಟ್ ನಲ್ಲಿದ್ದರು.
ವರದಿಯ ಪ್ರಕಾರ, ವೆಂಕಟ್ ತೀವ್ರ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರು..ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಜನಪ್ರಿಯ ನಟ ಫಿಶ್ ವೆಂಕಟ್ ನಿಧನಕ್ಕೆ ಅನೇಕ ಸಿನಿ ಗಣ್ಯರು ಸಂತಾಪ ಸೂಚಿಸಿದ್ದಾರೆ.
You Might Also Like
TAGGED:ಫಿಶ್ ವೆಂಕಟ್'