ಮಂಗಳೂರು : ಮಂಗಳೂರಿನಲ್ಲಿ ನಟೋರಿಯಸ್ ವಂಚಕ ಅರೆಸ್ಟ್ ಆಗಿದ್ದು, ಐಷಾರಾಮಿ ವ್ಯಕ್ತಿಗಳು, ಉದ್ಯಮಿಗಳೇ ಈತನ ಟಾರ್ಗೆಟ್ ಆಗಿದ್ದರು.
ಕೋಟಿ ಕೋಟಿ ಸಾಲ ಕೊಡುವುದಾಗಿ ಉದ್ಯಮಿಗಳಿಗೆ ನಂಬಿಸಿ , ಇಷ್ಟು ಸಾಲಕ್ಕೆ ಇಷ್ಟು ಹಣ ಎಂದು ಅವರಿಂದ ಹಣ ಪಡೆದು ನಂತರ ಹಣ ಕೊಡದೇ ವಂಚನೆ ಎಸಗುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ರೋಹನ್ ಸಲ್ಡನಾ ಎಂದು ಗುರುತಿಸಲಾಗಿದೆ. ಸಾಲ ಕೊಡಿಸುವ ನಾಟಕ ಮಾಡಿ 200 ಕೋಟಿಗೂ ಅಧಿಕ ವಂಚನೆ ಎಸಗಿದ್ದಾನೆ. ಸುಮಾರು 20 ಕ್ಕೂ ಹೆಚ್ಚು ಮಂದಿಗೆ ಈತ ವಂಚನೆ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕೇವಲ 3 ತಿಂಗಳಿನಲ್ಲಿ 45 ಕೋಟಿಗೂ ಹೆಚ್ಚು ವಂಚನೆ ಎಸಗಿರುವ ಆರೋಪ ಕೇಳಿಬಂದಿದೆ.
ವಂಚನೆ ಎಸಗಿದ ಹಣದಿಂದ ಐಷಾರಾಮಿ ಬಂಗಲೆ ಕಟ್ಟಿದ್ದನು. ಬಂಗಲೆ ಒಳಗೆ ಒಂದು ಬೆಡ್ ರೂಮ್ ನಲ್ಲಿ ರಹಸ್ಯವಾದ ಅಂಡರ್ ಗ್ರೌಂಡ್ ಮಾಡಿದ್ದನು. ಯಾರಾದರೂ ಈತನನ್ನು ಹುಡುಕಿಕೊಂಡು ಬಂದರೆ ಅದರ ಮೂಲಕ ಈತ ಎಸ್ಕೇಪ್ ಆಗುತ್ತಿದ್ದನು.ಸದ್ಯ ಈತನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
You Might Also Like
TAGGED:ನಟೋರಿಯಸ್ ವಂಚಕ