ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಶಿವಮೊಗ್ಗ ಪ್ರಾದೇಶಿಕ ಕೇಂದ್ರದಲ್ಲಿ 2025-26 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯಲ್ಲಿ ವಿವಿಧ ಕೋರ್ಸ್ಗಳಿಗೆ ಪ್ರವೇಶಾತಿ ಈಗಾಗಲೇ ಆರಂಭವಾಗಿದ್ದು ಆಲ್ಕೊಳ ವೃತ್ತ, ಸಾಗರ ರಸ್ತೆಯಲ್ಲಿರುವ ಕರಾಮುವಿ ಪ್ರಾದೇಶಿಕ ಕಚೇರಿ, ಶಿವಮೊಗ್ಗ ಇಲ್ಲಿ ಪ್ರವೇಶಾತಿ ಪಡೆಯಬಹುದು.
ಎಲ್ಲಾ ಭಾನುವಾರ, ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಎಲ್ಲಾ ಸರ್ಕಾರಿ ರಜೆ ದಿನಗಳಂದು ಕಚೇರಿ ಎಂದಿನಂತೆ ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ KSOUPORTAL.COM ದೂ.ಸಂ: 08182-250367 ನ್ನು ಸಂಪರ್ಕಿಸಬಹುದೆಂದು ಕರಾಮುವಿ ಪ್ರಾದೇಶಿಕ ನಿರ್ದೇಶಕ ಡಾ.ವಿಜಯ್ ಪ್ರಕಾಶ್ ತಿಳಿಸಿದ್ದಾರೆ.
You Might Also Like
TAGGED:ಕರ್ನಾಟಕ ರಾಜ್ಯ ಮುಕ್ತ ವಿವಿ