ಕಾರವಾರ: ಜೋಕಾಲಿಯಲ್ಲಿ ಆಟವಾಡುವಾಗ ಕುತ್ತಿಗೆಗೆ ವೇಲ್ ಸುತ್ತಿಕೊಂಡು ಬಾಲಕಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ತೆರ್ನಮಕ್ಕಿ ಸಭಾತಿಯಲ್ಲಿ ನಡೆದಿದೆ.
ಪ್ರಣಿತಾ ಜಗನ್ನಾಥ ನಾಯಕ(13) ಮೃತಪಟ್ಟ ಬಾಲಕಿ. 7ನೇ ತರಗತಿಯಲ್ಲಿ ಓದುತ್ತಿದ್ದ ಪ್ರಣಿತಾ ಗುರುವಾರ ಶಾಲೆಗೆ ರಜೆ ಇದ್ದ ಕಾರಣ ಮನೆಯಲ್ಲಿದ್ದಳು. ತಾಯಿ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಸಹೋದರಿಯೊಂದಿಗೆ ವೇಲ್ ನಿಂದ ಜೋಕಾಲಿ ಕಟ್ಟಿಕೊಂಡು ಪ್ರಣಿತಾ ಆಟವಾಡುತ್ತಿದ್ದಳು. ಈ ವೇಳೆ ಆಕಸ್ಮಿಕವಾಗಿ ಜೋಕಾಲಿಯ ವೇಲ್ ಕುತ್ತಿಗೆಗೆ ಬಿಗಿದುಕೊಂಡ ಪರಿಣಾಮ ಉಸಿರುಗಟ್ಟಿದೆ. ವೇಲ್ ನಿಂದ ಬಿಡಿಸಿಕೊಳ್ಳಲು ಸಾಧ್ಯವಾಗದೇ ಪ್ರಣಿತಾ ಮೃತಪಟ್ಟಿದ್ದಾಳೆ ಎನ್ನಲಾಗಿದೆ.