ಬುಧವಾರ ಪಂಜಾಬ್’ನ ಗೋಲ್ಡನ್ ಟೆಂಪಲ್’ಗೆ ಮತ್ತೆ ಬಾಂಬ್ ಬೆದರಿಕೆ ಬಂದಿದ್ದು, ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಗೆ ಮೂರು ದಿನಗಳ ಅವಧಿಯಲ್ಲಿ ಬಂದಿರುವ ಮೂರನೇ ಬೆದರಿಕೆ ಇದಾಗಿದೆ.
ಭದ್ರತಾ ಪರಿಶೀಲನೆಯ ಭಾಗವಾಗಿ ಸುವರ್ಣ ದೇವಾಲಯ ಆವರಣದಲ್ಲಿ ಶ್ವಾನ ದಳವನ್ನು ನಿಯೋಜಿಸಲಾಗಿದ್ದು, ತೀವ್ರ ಶೋಧ ನಡೆಸಲಾಗುತ್ತಿದೆ.
ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (ಎಸ್ಜಿಪಿಸಿ) ಕಾರ್ಯದರ್ಶಿ ಪ್ರತಾಪ್ ಸಿಂಗ್, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸೋಮವಾರ ಮತ್ತು ಮಂಗಳವಾರವೂ ಸ್ವರ್ಣ ಮಂದಿರಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ವರದಿಗಳ ಪ್ರಕಾರ, ಅಮೃತಸರ ಆಯುಕ್ತ ಗುರುಪ್ರೀತ್ ಸಿಂಗ್ ಭುಲ್ಲಾ ಅವರು ಸ್ವರ್ಣ ಮಂದಿರದಲ್ಲಿ ಸ್ಫೋಟದ ಬೆದರಿಕೆ ಇಮೇಲ್ ಕುರಿತು ಪೊಲೀಸರಿಗೆ ದೂರು ಬಂದಿದೆ ಎಂದು ಹೇಳಿದ್ದಾರೆ.
TAGGED:ಪಂಜಾಬ್