ಅಮರಾವತಿ: ಇದೇ ಮೊದಲ ಬಾರಿಗೆ ಆಂಧ್ರಪ್ರದೇಶ ಸರ್ಕಾರ ಮದ್ಯದ ದರ ಇಳಿಕೆ ಮಾಡಿದೆ. ಪ್ರತಿ ಬಾಟಲ್ ಮೇಲೆ ಕನಿಷ್ಠ 10 ರೂಪಾಯಿಂದ 100 ರೂಪಾಯಿವರೆಗೆ ಬೆಲೆ ಕಡಿತ ಮಾಡಿದೆ.
ಇದರಿಂದಾಗಿ ರಾಜ್ಯದಲ್ಲಿ ಮದ್ಯ ಸೇವಿಸುವವರಿಗೆ ಪ್ರತಿ ತಿಂಗಳು 116 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಮದ್ಯದ ನೀತಿಯಲ್ಲಿ ಪಾರದರ್ಶಕತೆ ಖಚಿತಪಡಿಸಿಕೊಂಡು ಕೈಗೆಟುಕುವ ದರದಲ್ಲಿ ಮದ್ಯ ಪೂರೈಸಲು ಕ್ರಮ ಕೈಗೊಳ್ಳಬೇಕು. ನಕಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಸೂಚಿಸಿದ್ದಾರೆ.
ಹೊಸ ಮದ್ಯ ನೀತಿಯಿಂದ ರಾಜ್ಯದ ಆದಾಯ ಹೆಚ್ಚುವ ನಿರೀಕ್ಷೆ ಇದೆ. ಮದ್ಯ ದರ ಕನಿಷ್ಠ 10 ರೂಪಾಯಿಯಿಂದ 100 ರೂಪಾಯಿವರೆಗೆ ಬೆಲೆ ಕಡಿತ ಮಾಡಲಾಗಿದೆ. ಇದರಿಂದ ಮದ್ಯ ಸೇವಿಸುವವರಿಗೆ ಹೊರೆ ಇಳಿಕೆಯಾಗಲಿದೆ ಎಂದು ತಿಳಿಸಿದ್ದಾರೆ.