ಹೊಸಪೇಟೆ(ವಿಜಯನಗರ ಜಿಲ್ಲೆ): ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ಸೋಮವಾರ ಸಂಜೆ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ ಮಗ ಸಾವನ್ನಪ್ಪಿದ್ದಾರೆ.
ತೋಟವೊಂದರ ಬೇಲಿಗೆ ಅವೈಜ್ಞಾನಿಕವಾಗಿ ಸುತ್ತಿದ್ದ ವಿದ್ಯುತ್ ತಂತಿಯಿಂದ ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿದೆ. ವಿದ್ಯುತ್ ಸ್ಪರ್ಶಿಸಿ ತಂದೆ, ಮಗ ಸಾವನ್ನಪ್ಪಿದ್ದಾರೆ. ದುಗ್ಗಾವತಿಯ ರಮೇಶ್(40) ಹಾಗೂ ಪುತ್ರ ಚಂದ್ರಪ್ಪ(17) ಮೃತಪಟ್ಟವರು ಎಂದು ಹೇಳಲಾಗಿದೆ.
ಡೆಡ್ ಲೈನ್ ವಿದ್ಯುತ್ ಕಂಬದ ತಂತಿಗಳನ್ನು ತುಂಡರಿಸಿ ಅವೈಜ್ಞಾನಿಕವಾಗಿ ಬೇಲಿಯ ಮೇಲೆ ಸುತ್ತಲಾಗಿತ್ತು. ಆದರೆ ಕಂಬದ ಮೇಲೆ ವಿದ್ಯುತ್ ಸಂಪರ್ಕ ತಪ್ಪಿಸಿರಲಿಲ್ಲ. ಇದರಿಂದಾಗಿ ವಿದ್ಯುತ್ ಪ್ರವಹಿಸಿದೆ ತೋಟಕ್ಕೆ ಹೋಗಲು ಅದೇ ಮಾರ್ಗವಾಗಿ ಬಂದಿದ್ದ ರಮೇಶ್ ಮತ್ತು ಚಂದ್ರಪ್ಪ ವಿದ್ಯುತ್ ಪ್ರವಹಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.