BIG NEWS : ಹುತಾತ್ಮರ ಸ್ಮಶಾನದೊಳಗೆ ಹೋಗಲು ಗೇಟ್ ಹಾರಿದ ಸಿಎಂ ‘ಒಮರ್ ಅಬ್ದುಲ್ಲಾ’: ವಿಡಿಯೋ ವೈರಲ್ |WATCH VIDEO

ಶ್ರೀನಗರ : ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮಜರ್-ಎ-ಶುಹಾದಾ ಗೇಟ್ (ಹುತಾತ್ಮರ ಸ್ಮಶಾನ ) ಹಾರಿ ಹೋಗುತ್ತಿರುವ ವಿಡಿಯೋ ಇತ್ತೀಚೆಗೆ ಆನ್ಲೈನ್ನಲ್ಲಿ ಕಾಣಿಸಿಕೊಂಡಿದ್ದು, ವಿರೋಧ ಪಕ್ಷದ ನಾಯಕರಿಂದ ಟೀಕೆಗೆ ಗುರಿಯಾಗಿದೆ.

ಜುಲೈ 13 ರ ಭಾನುವಾರ ಹುತಾತ್ಮರ ದಿನದಂದು ಪ್ರಾರ್ಥನೆ ಸಲ್ಲಿಸಲು ಅಬ್ದುಲ್ಲಾ ಅವರನ್ನು ಭದ್ರತಾ ಪಡೆಗಳು ತಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈಗ ವೈರಲ್ ಆಗಿರುವ ಕ್ಲಿಪ್ನಲ್ಲಿ, ಮುಖ್ಯಮಂತ್ರಿ ಶ್ರೀನಗರದ ನೌಹಟ್ಟಾದಲ್ಲಿರುವ ಪ್ರಸಿದ್ಧ ಹುತಾತ್ಮರ ಸಮಾಧಿಯ ಗೇಟ್ ಹತ್ತುವುದನ್ನು ಕಾಣಬಹುದು.

ಪೊಲೀಸರು ಒಮರ್ ಅಬ್ದುಲ್ಲಾ ಅವರನ್ನು ತಡೆಯಲು ಪ್ರಯತ್ನಿಸಿದರಾದರೂ, ಪೊಲೀಸರನ್ನು ನೂಕಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಗಳು ಹುತಾತ್ಮ ಸ್ಮಶಾನದೊಳಕ್ಕೆ ಪ್ರವೇಶಿಸಿದರು. ಜುಲೈ 13ರ ಹತ್ಯೆಗಳ ವಾರ್ಷಿಕೋತ್ಸವವನ್ನು ಆಚರಿಸಲು ಅನುಮತಿ ಇರಲಿಲ್ಲವಾದ್ದರಿಂದ, ಪೊಲೀಸರು ಒಮರ್ ಅಬ್ದುಲ್ಲಾ ಅವರನ್ನು ತಡೆಯಲು ಪ್ರಯತ್ನಿಸಿದರು.

ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಶನಿವಾರ ಗೃಹಬಂಧನಕ್ಕೊಳಗಾಗಿಸಿದ ನಂತರ ಮತ್ತೆ ತಡೆಯುವುದನ್ನು ತಪ್ಪಿಸಲು ತಾನು ಅನಿರೀಕ್ಷಿತವಾಗಿ ಬಂದಿದ್ದೇನೆ ಎಂದು ಹೇಳಿದರು. ಅವರು ಇಂದು ಮತ್ತೆ ನಮ್ಮನ್ನು ತಡೆಯಲು ಪ್ರಯತ್ನಿಸಿದರು. ಆದರೆ ನಾವು ಅವರ ಪ್ರಯತ್ನಗಳನ್ನು ವಿಫಲಗೊಳಿಸಿದ್ದೇವೆ” ಎಂದು ಅವರು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read