ಡಿಜಿಟಲ್ ಡೆಸ್ಕ್ : ಶೂಟಿಂಗ್ ವೇಳೆ ಕಾರು ಅಪಘಾತಗೊಂಡಿದ್ದು, ಸ್ಟಂಟ್ ಮಾಸ್ಟರ್ ಮೋಹನ್ ರಾಜ್ ಸಾವನ್ನಪ್ಪಿದ್ದಾರೆ.
ನಿರ್ದೇಶಕ ಪಾ. ರಂಜಿತ್ ಅವರ ಮುಂಬರುವ ಚಿತ್ರ ವೆಟ್ಟುವಂ ಸೆಟ್ನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೋಹನ್ ರಾಜ್ ಸಾವನ್ನಪ್ಪಿದ್ದಾರೆ.
ರಂಜಿತ್ ನಿರ್ದೇಶನದ ‘ವೇಟುವಂ’ ಚಿತ್ರೀಕರಣದ ವೇಳೆ ಸಂಭವಿಸಿದ ಅವಘಡದಲ್ಲಿ ಸ್ಟಂಟ್ ಮಾಸ್ಟರ್ ಮೋಹನ್ ರಾಜ್ ಸಾವನ್ನಪ್ಪಿದ್ದಾರೆ. ಕಾರು ಎತ್ತರಕ್ಕೆ ಹಾರಬೇಕಾದ ಹೈ-ರಿಸ್ಕ್ ಆಕ್ಷನ್ ಸೀಕ್ವೆನ್ಸ್ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಪಘಾತಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಶೂಟಿಂಗ್ ವೇಳೆ ನಡೆದ ಅವಘಡದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Mohan Raj who lost his life due to the accident during a car action sequence in #PaRanjith’s #Vettuvam ft. Arya.
— Rajasekar (@sekartweets) July 14, 2025
More safety measures needed in Indian cinema for stunt sequences 🙏pic.twitter.com/RdBqoDNYPE

You Might Also Like
TAGGED:ಮೋಹನ್ ರಾಜ್