ಯಾದಗಿರಿ: ಆಸ್ತಿ ವಿಚಾರಕ್ಕೆ ತಂದೆಯನ್ನೇ ಪುತ್ರ ಬರ್ಬರವಾಗಿ ಕೊಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮಡ್ನಾಳ ಗ್ರಾಮದ ಹೊರವಲಯದಲ್ಲಿ ಭಾನುವಾರ ನಡೆದಿದೆ.
ಹಳಿಸಗರ ಗ್ರಾಮದ ಯಂಕಪ್ಪ ಮ್ಯಾಕಲದಿನ್ನಿ(70) ಹತ್ಯೆಯಾದವರು. ಆಸ್ತಿ ವಿಚಾರಕ್ಕೆ ಅವರ ಪುತ್ರ ನಾಗಪ್ಪ ಕೊಲೆ ಮಾಡಿದ್ದಾನೆ. ತಂದೆ -ಮಗನ ನಡುವೆ ಆಸ್ತಿ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಯಂಕಪ್ಪ ಜಮೀನಿನಲ್ಲಿ ಕೆಲಸ ಮಾಡುವಾಗ ಆಸ್ತಿ ವಿಚಾರಕ್ಕೆ ಜಗಳ ತೆಗೆದ ನಾಗಪ್ಪ ಚೂಪಾದ ಕಬ್ಬಿಣದ ಪಟ್ಟಿಯಿಂದ ಬಲವಾಗಿ ತಲೆಗೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಯಂಕಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಲೆ ಮಾಡಿದ ನಂತರ ನಾಗಪ್ಪ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.