ಬೆಂಗಳೂರು: ಬೀದಿ ನಾಯಿಗಳಿಗೆ ವಿಶೇಷವಾಗಿ ತಯಾರಿಸಿದ ಭಕ್ಷ್ಯಗಳನ್ನು ನೀಡುತ್ತಿಲ್ಲ. ಮಾನವ ಗುಣಮಟ್ಟದ ಆಹಾರವನ್ನು ಬೀದಿ ನಾಯಿಗಳಿಗೆ ನೀಡುವುದಿಲ್ಲ ಎಂದು ಬಿಬಿಎಂಪಿ ಸ್ಪಷ್ಟನೆ ನೀಡಿದೆ.
ನಾಯಿ ದರ್ಜೆಯ ಆಹಾರಗಳನ್ನು ಬೀದಿ ನಾಯಿಗಳಿಗೆ ನೀಡಲಾಗುವುದು. ಟೆಂಡರ್ ನಲ್ಲಿ ಊಟದ ಪದಾರ್ಥಗಳನ್ನು ನಮೂದಿಸಿದ್ದು ಬಿಟ್ಟರೆ ವಿತರಿಸುವ ಆಹಾರಕ್ಕೆ ಹೆಸರಿಟ್ಟಿಲ್ಲ ಎಂದು ಬಿಬಿಎಂಪಿ ಅಧಿಕೃತವಾಗಿ ಸ್ಪಷ್ಟನೆ ನೀಡಿದೆ.
ಕೋಳಿ ಮಾಂಸದ ತ್ಯಾಜ್ಯ ಬಳಸಿ ಆಹಾರ ಸಿದ್ಧಪಡಿಸಿ ಬೀದಿ ನಾಯಿಗಳಿಗೆ ನೀಡಲಾಗುವುದು. ಅದಕ್ಕಾಗಿ ಕೋಳಿಯನ್ನು ಕೊಂದು ಹಾಕುವುದಿಲ್ಲ. ಟೆಂಡರ್ ನಲ್ಲಿ ನಾಯಿಗೆ ತಯಾರಿಸುವ ಆಹಾರದ ಪದಾರ್ಥವನ್ನು ಮಾತ್ರ ನಮೂದಿಸಲಾಗಿತ್ತು. ಚಿಕನ್ ರೈಸ್, ಬಿರಿಯಾನಿ ಎಂದು ನಮೂದಿಸಿಲ್ಲ. ನಾಯಿಗಳು ಸಸ್ಯಾಹಾರ ತಿನ್ನುವುದಿಲ್ಲ ಎಂದು ಬಿಬಿಎಂಪಿ ಹೇಳಿದೆ.