ಚಿಕ್ಕಮಗಳೂರು : ಜುಲೈ 17 ರಿಂದ ಆರಂಭವಾಗಲಿರುವ ಚಿಕ್ಕಮಗಳೂರು-ತಿರುಪತಿ ಎಕ್ಸ್ಪ್ರೆಸ್ ರೈಲಿಗೆ ದತ್ತಪೀಠ ಎಕ್ಸ್ಪ್ರೆಸ್ ಎಂದು ಹೆಸರಿಡುವಂತೆ ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದೆ.
ಚಿಕ್ಕಮಗಳೂರಿನಿಂದ ತಿರುಪತಿಗೆ ಸಂಚರಿಸುವ ಎಕ್ಸ್ಪ್ರೆಸ್ ರೈಲಿಗೆ ನಿನ್ನೆ ಸಚಿವ ವಿ. ಸೋಮಣ್ಣ ಸಾಂಕೇತಿಕವಾಗಿ ಚಾಲನೆ ನೀಡಿದ್ದರು. ಇದೀಗ ಈ ರೈಲಿಗೆ ದತ್ತಪೀಠ ಎಕ್ಸ್ಪ್ರೆಸ್ ಎಂದು ಹೆಸರಿಡುವಂತೆ ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದೆ.
ಕೋಟಾ ಶ್ರೀನಿವಾಸ ಪೂಜಾರಿ ಟ್ವೀಟ್
ದತ್ತಪೀಠ ಎಕ್ಸ್ಪ್ರೆಸ್” ಚಿಕ್ಕಮಗಳೂರು-ತಿರುಪತಿ ಎಕ್ಸ್ಪ್ರೆಸ್ ರೈಲಿಗೆ ದತ್ತಪೀಠ ಎಕ್ಸ್ಪ್ರೆಸ್ ಎಂಬ ಹೆಸರನ್ನಿಡಬೇಕೆಂಬ ನಮ್ಮ ಮನವಿಗೆ ಕೇಂದ್ರ ರೈಲು ಸಚಿವರು ಒಪ್ಪಿಗೆ ನೀಡಿದ್ದಾರೆ. ಲಕ್ಷಾಂತರ ಹಿಂದೂ ಕಾರ್ಯಕರ್ತರ ಹೋರಾಟ, “ದತ್ತಪೀಠ ನಮ್ಮದು” ಎಂಬ ಅಚಲ ನಿರ್ಧಾರಕ್ಕೆ ನಮ್ಮದೊಂದು ಕಾಣಿಕೆ ಎಂದು ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ದತ್ತಪೀಠವಿರುವ ಚಿಕ್ಕಮಗಳೂರಿನಿಂದ ಶ್ರೀನಿವಾಸ ನೆಲೆಸಿರುವ ತಿರುಪತಿಗೆ ಹೊಸ ರೈಲಿಗೆ ಚಾಲನೆ ನೀಡಿದ ಅತ್ಯಂತ ಸಂತಸದ ಸಂದರ್ಭ. ಚಿಕ್ಕಮಗಳೂರು ಜನತೆಯ ಅನೇಕ ವರ್ಷಗಳ ಕನಸನ್ನು ಈಡೇರಿಸಿದ ಭಾವುಕ ಕ್ಷಣವಿದು. ಈ ಬೇಡಿಕೆಯನ್ನು ಈಡೇರಿಸಿ ಈ ರೈಲಿಗೆ ಕೇಂದ್ರ ಸಚಿವರಾದ ವಿ ಸೋಮಣ್ಣ ರವರು ಹಸಿರು ನಿಶಾನೆ ತೋರಿಸಿದ್ದಾರೆ ಎಂದಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.