ಕಾರವಾರ: ಭಾರತೀಯ ಸಂಪ್ರದಾಯ, ಆಚರಣೆ, ಆಧ್ಯಾತ್ಮದ ಬಗ್ಗೆ ಆಸಕ್ತಿ ಹೊಂದಿ, ಹಿಂದೂ ಧರ್ಮವನ್ನು ಶ್ರದ್ಧೆಯಿಂದ ಅನುಸರಿಸುತ್ತಿದ್ದ ರಷ್ಯಾ ಮೂಲದ ಮಹಿಳೆಯೊಬ್ಬರು ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ಗೋರ್ಣದ ಕಾಡಿನಲ್ಲಿ ವಾಸವಾಗಿದ್ದು, ಸದ್ಯ ಅವರನ್ನು ರಕ್ಷಿಸಿರುವ ಘಟನೆ ನಡೆದಿದೆ.
ಮೋಹಿ (40) ಹಾಗೂ ಅವರ ಮಕ್ಕಳಾದ 6 ವರ್ಷದ ಪ್ರೇಯಾ ಹಾಗೂ 4 ವರ್ಷದ ಅಮಾ ರಕ್ಷಿಸಲ್ಪಟ್ಟವರು. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋರ್ಣದ ಅರಣ್ಯ ಪ್ರದೇಶದಲ್ಲಿ ಗುಹೆಯೊಂದರಲ್ಲಿ ವಾಸವಾಗುತ್ತಾ ಅಲ್ಲಿಯೇ ಜೀವನ ಸಾಗಿಸುತ್ತಿದ್ದರು.
ರಷ್ಯಾದಿಂದ ಬಿಸಿನೆಸ್ ವೀಸಾದಡಿ ಗೋವಾಗೆ ಬಂದಿದ್ದ ಮಹಿಳೆ ಗೋರ್ಣಕ್ಕೆ ಬಂದು ಬಳಿಕ ಇಲ್ಲಿನ ಆಚಾರ-ವಿಚಾರಗಳಿಗೆ ಪ್ರಭಾವಿತಳಾಗಿ ಗೋರ್ಣದ ಬಳಿಯ ಅರಣ್ಯ ಒರದೇಶದ ಗೊಹೆಯೊಂದರಲ್ಲಿ ಇಬ್ಬರು ಪುಟ್ಟ ಮಕ್ಕಳೊಂದಿಗೆ ಶಿವಲಿಂಗದ ಪೂಜೆ ಮಾಡುತ್ತಾ ಕಾಲಕಳೆಯುತ್ತಿದ್ದರು. ಸಿಪಿಐ ಶ್ರೀಧರ್ ನೇತೃತ್ವದ ತಂಡ ಈ ಭಾಗದಲ್ಲಿ ಗುಡ್ಡ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಗಸ್ತು ತಿರುಗುತ್ತಿದ್ದಾಗ ಗುಹೆಯಲ್ಲಿ ಯಾರೋ ವಾಸವಾಗಿರುವುದನ್ನು ಗಮನಿಸಿದ್ದಾರೆ.
ಗುಹೆ ಪರಿಶೀಲಿಸಿದಾಗ ರಷ್ಯಾ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ವಾಸವಾಗಿರುವುದು ಗೊತ್ತಾಗಿದೆ. ರಷ್ಯಾದ ಮೋಹಿ ಅವರಿಗೆ ಆಧ್ಯಾತ್ಮದ ಕಡೆಗೆ ಮೊದಲಿನಿಂದ ಒಲವಿತ್ತತಂತೆ. ಹಾಗಾಗಿ ತಾನು ಪ್ರಕೃತಿ ನಡುವೆ ವಾಸವಾಗಬೇಕು ಎಂದು ಭಾರತಕ್ಕೆ ಬಂದು ಇಲ್ಲಿನ ಗೋಕರ್ಣಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಮೋಹಿ, ಗುಹೆಯಲ್ಲಿ ವಾಸವಾಗುತ್ತಾ ಕಾಲಕಳೆದಿದ್ದಾರೆ.
ಸದ್ಯ ಮೋಹಿ ಹಾಗೂ ಅವರ ಇಬ್ಬರು ಮಕ್ಕಳನ್ನು ರಕ್ಷಿಸಿ ಬೆಂಗಳೂರಿನ ರಾಯಭಾರ ಕಚೇರಿಗೆ ಕಳುಹಿಸಲಾಗಿದೆ. ಮತ್ತೆ ಅವರನ್ನು ರಷ್ಯಾಗೆ ಕಳುಹಿಸುವ ವ್ಯವಸ್ಥೆ ನಿಟ್ತಿನಲ್ಲಿ ಅಧಿಅಕರಿಗಳ ಜೊತೆ ಮಾತುಕತೆ ನಡೆದಿದೆ.